ತುಮಕೂರು ಜಿಲ್ಲೆಯಿಂದ ಅಧಿಕೃತ ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಮಿಸ್ ಕಾಲ್ ಅಭಿಯಾನ ಆರಂಭ ನಿಖಿಲ್ ಕುಮಾರಸ್ವಾಮಿ!!"
ಬೆಂಗಳೂರು /15/06/25 ಆರಂಭ್ ಸುದ್ದಿ ಕನ್ನಡ ಜೆಡಿಎಸ್ ರಾಜ್ಯ ಪ್ರವಾಸಕ್ಕೆಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಸೋಮವಾರ ತುಮಕೂರು ಜಿಲ್ಲೆಯಿಂದ ಅಧಿಕೃತವಾಗಿ ಪ್ರವಾಸ ಆರಂಭ ಮಾಡ್ತೇನೆ ಇಂದಿನಿಂದ ಅಧಿಕೃತವಾಗಿ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಸದಸ್ಯತ್ವ ನೋಂದಣಿ ಆರಂಭ ಮಾಡಿದ್ದೇವೆ.ರಾಜ್ಯ ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.ಕನಿಷ್ಠ ಐವತ್ತು ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಹೋಗೋಣ. ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ಆ.16 ರವರೆಗೆ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಕಡೆಯೂ ಪ್ರವಾಸ ಮಾಡ್ತೇವೆ. ಕಾರ್ಯಕರ್ತರು ಒಂದು ಛಲ ಇಟ್ಟುಕೊಳ್ಳಬೇಕು.ನಮ್ಮದು ಸಣ್ಣ ಪ್ರಮಾಣದ ಪಕ್ಷ ಅಲ್ಲ.ಹಳ್ಳಿ ಹಳ್ಳಿಗಳಿಗೆ ಹೋಗಿ ಒಂದು ರಿಜಿಸ್ಟರ್ ಮಾಡಿ ಯಾವುದೇ ಹಣ ಕಾಸು ಖರ್ಚಾಗಲ್ಲ ಎಲ್ಲರ ಬಳಿ ಸ್ಮಾರ್ಟ್ ಪೋನ್ ಇದೆ. ಡಿಜಿಟಲ್ ನಲ್ಲಿ ರಿಜಿಸ್ಟರ್ ಮಾಡಿಸಿ ಪಕ್ಷದ ಸಂಘಟನೆಯಲ್ಲಿ ಕೈ ಜೋಡಿಸಿ ಎಂದು ಮನವಿ ಮಾಡಿದರು.ಯಾರೂ ಕೂಡ ಮೈ ಮರೆಯೋದು ಬೇಡ. ಇವತ್ತಿಂದ ಟೈಂ ಶುರುವಾಗಿದೆ. ಕನಿಷ್ಠ 50 ಲಕ್ಣ ಮಿಸ್ ಕಾಲ್ಟ್ ಸದಸ್ಯ ಕೊಡ್ತೇವೆಂದು. ದೇವೇಗೌಡರು ಹಾಗೂ ಕುಮಾರಣ್ಣಗೆ ಭರವಸೆ ಕೊಡ್ತಿದ್ದೇನವೆ ಎಂದು ತಿಳಿಸಿದರು....

Post a Comment