ಬೀದರ್ ಜಿಲ್ಲಾ ಔರಾದ್ ಪಟ್ಟಣದ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಗಸ್ಟ್ 11 ರಂದು ಬೆಳೆಗ್ಗೆ 10:30 ಗಂಟೆಗೆ ಸೋಮವಾರ ಸುಭಾಸ್ ಚಂದ್ರಭೋಸ್ ಯುವಕ ಸಂಘದಿಂದ ಪತ್ರಿಕಾ ದಿನಾಚರಣೆ!!!!
WWW.ARAMBHSUDDIKANNADA.COMಬೀದರ್ ಜಿಲ್ಲಾ ಔರಾದ್ ಪಟ್ಟಣದ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಗಸ್ಟ್ 11 ರಂದು ಬೆಳೆಗ್ಗೆ 10:30 ಗಂಟೆಗೆ ಸೋಮವಾರ ಸುಭಾಸ್ ಚಂದ್ರಭೋಸ್ ಯುವಕ ಸಂಘದಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ರತ್ನದೀಪ ಕಸ್ತೂರೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಮಾಜಿ ಜಿಪಂ ಸದಸ್ಯ ವಿದ್ಯಾಸಾಗರ ಶಿಂಧೆ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಗುಂಡಪ್ಪ ವಕೀಲ್ ಅಧ್ಯಕ್ಷತೆ ವಹಿಸುವರು.
ಹಿರಿಯ ಪತ್ರಕರ್ತ ಶಶಿಕಾಂತ ಎಸ್. ಶೆಂಬೆಳ್ಳಿ ವಿಶೇಷ ಉಪನ್ಯಾಸ ನೀಡುವರು. ಹಿರಿಯ ಮುಖಂಡ ಬಂಡೆಪ್ಪ ಕಂಟೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪತ್ರಕರ್ತ ಜಾನಸನ್ ಘೋಡೆ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ಬಿಸಿಎಂ ತಾಲೂಕು ಅಧಿಕಾರಿ ರವೀಂದ್ರ, ಯುವ ಮುಖಂಡ ವಿಪುಲ್ ಪೋಕಲವಾರ್, ಪ್ರಾಂಶುಪಾಲ ಅಕಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಸ್ತೂರೆ ತಿಳಿಸಿದ್ದಾರೆ.
WWW.ARAMBHSUDDIKANNADA.COM

Post a Comment