ತುಮಕೂರ್ ನಲ್ಲಿ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ-90 ದಿನಗಳ ವಿಶೇಷ ಅಭಿಯಾನ" ಅಕ್ಟೋಬರ್ 7 ರವರೆಗೆ ನ್ಯಾಯಮೂರ್ತಿ ನೂರುನ್ನೀಸಾ!!!!
𝘄𝘄𝘄. 𝗔𝗿𝗮𝗺𝗯𝗵𝘀𝘂𝗱𝗱𝗶𝗸𝗮𝗻𝗻𝗮𝗱𝗮. 𝗰𝗼𝗺
ತುಮಕೂರು ಆರಂಭ ಸುದ್ದಿ ಕನ್ನಡ 07-08-25ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಧ್ಯಸ್ಥಿಕೆ ಕೇಂದ್ರದಲ್ಲಿ ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ಪರಿಹರಿಸಲು ಅಕ್ಟೋಬರ್ 7 ರವರೆಗೆ "ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ-90 ದಿನಗಳ ವಿಶೇಷ ಅಭಿಯಾನ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮಾಹಿತಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ನೂರುನ್ನೀಸಾ ನೀಡಿದ್ದಾರೆ
ಈ ಅಭಿಯಾನದಲ್ಲಿ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು - ವೈವಾಹಿಕ ಮತ್ತು ಕುಟುಂಬ ನ್ಯಾಯಾಲಯ, ಮೋಟಾರು ಅಪಘಾತ ನ್ಯಾಯಮಂಡಳಿ, ಚೆಕ್ ಬೌನ್ಸ್, ಭೂಸ್ವಾಧೀನ ಮತ್ತು ಇತರ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.www.arambhsuddikannada.com ನಲ್ಲಿ ಅನೇಕ ಸುದ್ದಿಗಳು ವೀಕ್ಷಿಸಿ ನಿಮ್ಮ ಆರಂಭ ಸುದ್ದಿ ಕನ್ನಡ

Post a Comment