ಮುಂಬರುವ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮಂಟ್ ಮತ್ತು ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.
ಬೆಂಗಳೂರು ಆರಂಭ ಸುದ್ದಿ ಕನ್ನಡ 03-12-2025 ದಿನಾಂಕ 24.12.2025 (ಬುಧವಾರ) ರಂದು ರೈಲು ಸಂಖ್ಯೆ 06291 ಬೆಂಗಳೂರು ಕ್ಯಾಂಟ್ - ಬೀದರ್ ವಿಶೇಷ ಎಕ್ಸ್‌ಪ್ರೆಸ್ ಬೆಂಗಳೂರು ಕ್ಯಾಂಟ್‌ನಿಂದ ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್ ತಲುಪಲಿದೆ, ಮತ್ತೊಂದೆಡೆ, ಮರಳಿ ಸಂಚರಿಸುವ 06292 ಬೀದರ್ ಬೆಂಗಳೂರು ಕ್ಯಾಂಟ್ ವಿಶೇಷ ಎಕ್ಸ್ ಪ್ರೆಸ್ ರೈಲು ದಿನಾಂಕ 25.12.2025 (ಗುರುವಾರ) ರಂದು ಬೀದರ್‌ನಿಂದ ಮಧ್ಯಾಹ್ನ 1:00ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 4:00ಕ್ಕೆ ಬೆಂಗಳೂರು ಕ್ಯಾಂಟ್ ತಲುಪಲಿದೆ.
ಮಾರ್ಗಮಧ್ಯದಲ್ಲಿ, ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ, ಕಲಬುರಗಿ ಮತ್ತು ಹುಮನಾಬಾದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರಲಿದೆ, ಇದರಲ್ಲಿ ಒಂದು ಎಸಿ 2-ಟೈರ್, ಎರಡು ಎಸಿ 3-ಟೈರ್, ಹನ್ನೊಂದು ಸ್ವೀಪರ್ ಕ್ಲಾಸ್, ಆರು ಜನರಲ್ ಸೆಕೆಂಡ್ ಕ್ಲಾಸ್, ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ. www.arambhsuddikannada.com

Post a Comment