ಕೈಗಾರಿಕಾ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವರ್ಷಗಳ ಸಾಧನೆಗಳು- ಭವಿಷ್ಯದ ಚಿಂತನೆಗಳು ₹ 6,57,660 ಕೋಟಿ ಹೂಡಿಕೆ | 2,32,771 ಉದ್ಯೋಗಗಳು /115 ಒಡಂಬಡಿಕೆಗಳು....
ಬೆಂಗಳೂರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವನಾಗಿ 2ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದೆ.
ಪತ್ರಿಕಾ ಗೋಷ್ಠಿಯ ಪ್ರಮುಖ ಅಂಶಗಳು:
₹ 6,57,660 ಕೋಟಿ ಹೂಡಿಕೆ | 2,32,771 ಉದ್ಯೋಗಗಳು | 115 ಒಡಂಬಡಿಕೆಗಳು
₹ 6,57,660 ಕೋಟಿ ಮೌಲ್ಯದ ಹೂಡಿಕೆಗಳನ್ನು ರಾಜ್ಯಕ್ಕೆ ಆಕರ್ಷಿಸಿದ್ದು, ಇದರಿಂದ ಅಂದಾಜು 2,32,771 ಉದ್ಯೋಗಗಳು ಸೃಷ್ಟಿಯಾಗಲಿದೆ.
ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಿಂದ ಸುಮಾರು 906 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ₹1,13,200 ಕೋಟಿ ಹೂಡಿಕೆ ನಿರೀಕ್ಷೆಗಳಿವೆ. 2,23,982 ಉದ್ಯೋಗಗಳು ಸೃಷ್ಟಿಯಾಗಲಿದೆ.
ಫೆಬ್ರವರಿ-2025ರ ಮಾಹೆಯಲ್ಲಿ “ಇನ್ವೆಸ್ಟ್ ಕರ್ನಾಟಕ-2025” ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ
ರೂ. 6,23,970 ಕೋಟಿ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ
ರೂ. 4,03,533 ಕೋಟಿ ಹೂಡಿಕೆ ಮಾಡಲು 1101 ಕಂಪನಿಗಳು ಸಂಬಂಧಿಸಿದ ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ.
ನೀತಿ ರೂಪಣೆ ಹಾಗೂ ಸುಧಾರಣೆಗಳು:
ರಾಜ್ಯದಲ್ಲಿ ರೂ.7.50 ಲಕ್ಷ ಕೋಟಿ ಹೂಡಿಕೆಗಳನ್ನು ಆಕರ್ಷಿಸಲು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದೊಂದಿಗೆ ಹೊಸ ಕೈಗಾರಿಕಾ ನೀತಿ 2025-30ನ್ನು ಹೊರತರಲಾಗಿದೆ.
ಕೈಗಾರಿಕಾ ಅನುಮೋದನೆಗಳನ್ನು ಸರಳಗೊಳಿಸುವುದು ಮತ್ತು ಹೂಡಿಕೆದಾರರನ್ನು ಸಬಲೀಕರಣಗೊಳಿಸಲು ಹೊಸ, ಏಕೀಕೃತ ಏಕಗವಾಕ್ಷಿ ವ್ಯವಸ್ಥೆ ಜಾರಿ
ಸುಸ್ಥಿರ ಬೆಳವಣಿಗೆಗೆ ರಾಜ್ಯದ ಬದ್ಧತೆಯನ್ನು ಪ್ರದರ್ಶಿಸಲು ಪರಿಸರಸ್ನೇಹಿ ಇಂಧನ ನೀತಿ 2024-29 ಅನಾವರಣ
ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮದಡಿ 44,165 ಎಕರೆ ಪ್ರದೇಶವುಳ್ಳ 18 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶವೆಂದು (SIR) ಘೋಷಿಸಲಾಗಿದೆ.
ಜಾಗತಿಕ ಜಾಲವಿಸ್ತಾರ:
ಯುರೋಪ್, ಜಪಾನ್, ಕೊರಿಯಾ, ಅಮೆರಿಕಾ ದೇಶಗಳಲ್ಲಿ Global Roadshows – “Make in Karnataka” ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ.
ಯಶಸ್ವಿ ದಾವೋಸ್ ಪ್ರವಾಸ: ರಾಜ್ಯ ಸರ್ಕಾರದ ಜಾಗತಿಕ ಕಂಪೆನಿಗಳ ಜೊತೆಗೆ ರೂ. 23,000 ಕೋಟಿ ಮೌಲ್ಯದ 8 ಒಪ್ಪಂಗಳಿಗೆ ಸಹಿ.
ಜಾಗತಿಕ ಮಟ್ಟದ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, semiconductors ಹಾಗೂ ಇವಿ ಕಂಪನಿಗಳಿಂದ ಹೂಡಿಕೆ.
KSDL: 2024-25ರಲ್ಲಿ 1,700 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸಿದ್ದು, 416 ಕೋಟಿ ರೂ. ಲಾಭದ ಸಾರ್ವತ್ರಿಕ ದಾಖಲೆ ಬರೆದಿದೆ. 21 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಸುಗಂಧದ್ರವ್ಯಗಳನ್ನೂ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. 2028ರ ಹೊತ್ತಿಗೆ ಸಂಸ್ಥೆಯ ವಹಿವಾಟನ್ನು ವಾರ್ಷಿಕ 5,000 ಕೋಟಿ ರೂ.ಗೆ ಕೊಂಡೊಯ್ಯಲಾಗುವುದು.
MSIL. ಮೂಲಕ 200 ಐಷಾರಾಮಿ ಬೌಟಿಕ್, ಪ್ರವಾಸ ಪ್ಯಾಕೇಜ್ ರೂಪಿಸಲಾಗಿದೆ. ಸದ್ಯದಲ್ಲೇ 4 ಹಂತಗಳಲ್ಲಿ ಇ-ಕಾಮರ್ಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜತೆಗೆ ವಾರ್ಷಿಕ 10,000 ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್ ಫಂಡ್ ವ್ಯವಹಾರಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತಿದೆ.
ಹುಬ್ಬಳ್ಳಿ NGEF ಲಾಭದತ್ತ ಮುಖ ಮಾಡಿದೆ. ಸದ್ಯ ಅದರ ಟ್ರಾನ್ಸ್ಫಾರ್ಮರ್ಸ್ ದೇಶದಲ್ಲಿ ಮಾತ್ರವಲ್ಲ, ವಿದೇಶಕ್ಕೂ ರಫ್ತಾಗುತ್ತಿವೆ. ಬೇಡಿಕೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ಎನ್.ಜಿ.ಇ.ಎಫ್. ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಹಣಕಾಸು ಇಲಾಖೆ ಜತೆಗೂ ಹಲವು ಸುತ್ತಿನ ಮಾತುಕತೆ ನಡೆದಿದೆ.
ಎರಡು ವರ್ಷಗಳಲ್ಲಿ ನನಸಾಗಿರುವ ಗಮನಾರ್ಹ ಕಂಪನಿಗಳ ಹೂಡಿಕೆಯ ಸಂಕ್ಷಿಪ್ತ ವಿವರ
(1) ಫಾಕ್ಸ್ ಕಾನ್ ಕಂಪನಿಯಿಂದ 22,000 ಕೋಟಿ ರೂ: ಈ ಕಂಪನಿಯು ತೈವಾನಿನಿಂದ ಹೊರಗೆ ಇದೇ ಮೊದಲ ಬಾರಿಗೆ ಅತ್ಯಂತ ಬೃಹತ್ತಾದ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಸದ್ಯದಲ್ಲೇ ಉತ್ಪಾದನೆ ಆರಂಭಿಸಲಿದೆ. ಪ್ರತೀವರ್ಷ 2 ಕೋಟಿ ಮೊಬೈಲ್ ಫೋನುಗಳನ್ನು ತಯಾರಿಸಲಾಗುವುದು.
(2) ಎನ್.ಎಕ್ಸ್.ಪಿ ಸೆಮಿಕಂಡಕ್ಟರ್ಸ್ ನಿಂದ 1 ಬಿಲಿಯನ್ ಡಾಲರ್ ಹೂಡಿಕೆ
(3) ಟೊಯೋಟಾ ಕಿರ್ಲೋಸ್ಕರ್ ಕಂಪನಿಯಿಂದ 3,700 ಕೋಟಿ ರೂ.: ಟೊಯೋಟಾ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಈ ಹೂಡಿಕೆ ಮಾಡುತ್ತಿದೆ.
(4) ಸಂವರ್ಧನ ಮದರ್ಸನ್ ಕಂಪನಿಯಿಂದ 3,700 ಕೋಟಿ ರೂ.: ಈ ಕಂಪನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಉತ್ಪಾದಿಸಲಿದೆ.
(5) ಎಮ್ವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿಂದ 5,000 ಕೋಟಿ ರೂ: ಈ ಕಂಪನಿಯು ಸೋಲಾರ್ ಸೆಲ್ ಗಳನ್ನು ಉತ್ಪಾದಿಸಲಿದೆ.
(6) ಕ್ರೋನ್ಸ್ ಕಂಪನಿಯಿಂದ 315 ಕೋಟಿ ರೂ: ಬಾಟ್ಲಿಂಗ್ & ಪ್ಯಾಕೇಜಿಂಗ್ ಸಾಧನಗಳ ಉತ್ಪಾದನೆಯ ಉದ್ದೇಶ
(7) ಸನ್ಸೇರಾ ಕಂಪನಿಯಿಂದ 2,150 ಕೋಟಿ ರೂ: ಆಟೋಮೋಟೀವ್ ಮತ್ತು ನಾನ್-ಆಟೋಮೋಟೀವ್ ಬಿಡಿಭಾಗಗಳ ಉತ್ಪಾದನೆ.
(8) D.N. ಸೊಲ್ಯೂಷನ್ಸ್ ನಿಂದ 998 ಕೋಟಿ ರೂ: ಮಶೀನ್ ಟೂಲ್ ಉತ್ಪಾದನೆಯ ಉದ್ದೇಶ
(9) ಎಪ್ಸಿಲಾನ್ ಗ್ರೂಪ್ ನಿಂದ 15,350 ಕೋಟಿ ರೂ: ಆನೋಡ್ ಮತ್ತು ಕ್ಯಾಥೋಡ್ ಮೆಟೀರಿಯಲ್ಸ್ ಉತ್ಪಾದನೆ
(10) ಜಿಂದಾಲ್ ಎನರ್ಜಿ ಕಂಪನಿಯಿಂದ 4,960 ಕೋಟಿ ರೂ: 600 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆಯ ಉದ್ದೇಶ
ಭವಿಷ್ಯದ ದೃಷ್ಟಿ:
2030ರ ವೇಳೆಗೆ 1ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದು, ₹7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಗುರಿ.
ಬಿಯಾಂಡ್ ಬೆಂಗಳೂರು ಯೋಜನೆಯಡಿ ರಾಜ್ಯದ ಹಲವು ನಗರಗಳನ್ನು ಅಭಿವೃದ್ಧಿ ಪಡಿಸುವುದು
ಕರ್ನಾಟಕವನ್ನು ಸಿಲಿಕಾನ್ ರಾಜ್ಯವನ್ನಾಗಿ ಮಾಡುವುದು
ಡಾಬಸಪೇಟೆ- ದೊಡ್ಡಬಳ್ಳಾಪುರ ರಸ್ತೆಯಲ್ಲಿ 40,000 ಕೋಟಿ ರೂ. ಹೂಡಿಕೆಯೊಂದಿಗೆ 5,000 ಎಕರೆಯಲ್ಲಿ ಕ್ವಿನ್ ಸಿಟಿ ನಿರ್ಮಿಸಲಾಗುತ್ತದೆ.
ನವೋದ್ಯಮಗಳ ಹಬ್ ಆಗಿ ಬೆಂಗಳೂರಿಗೆ ಸಮೀಪದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ ಸ್ವಿಫ್ಟ್ ಸಿಟಿ ನಿರ್ಮಿಸಲಾಗುವುದು
ESDM (ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ & ತಯಾರಿಕೆ) ಇತ್ಯಾದಿಗಗಳಂತಹ ಹೊಸ ತಲೆಮಾರಿನ ವಲಯಗಳಲ್ಲಿ ನಾಯಕತ್ವದ ಸ್ಥಾನಕ್ಕೆ ಏರುವುದು
ರಾಜ್ಯದಾದ್ಯಂತ 50,000+ ಎಕರೆಗಳ ವಿಸ್ತರಣೆಯಲ್ಲಿ 68 ಕೈಗಾರಿಕಾ ಕ್ಲಸ್ಟರ್ ಗಳನ್ನು ಸೃಷ್ಟಿಸುವುದು.
ಮೂಲಸೌಕರ್ಯಗಳ ಇಲಾಖೆಯ ಕಾರ್ಯಪ್ರಗತಿ
ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಮೇಲ್ದರ್ಜೆಗೇರಿಸುವ ಉದ್ದೇಶ
ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗ ರೈಲು ಪ್ರಯಾಣವನ್ನು 10 ಗಂಟೆಗಳಿಗೆ ಇಳಿಸಲು ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಹಲವು ಸಭೆಗಳನ್ನು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿ ರೈಲುಗಳು ಹುಬ್ಬಳ್ಳಿ ಬೈಪಾಸ್ ಮೂಲಕವೇ ಸಂಚರಿಸಲಿವೆ.
ಪ್ರಗತಿಯಲ್ಲಿ 9 ರೈಲು ಮಾರ್ಗ ಯೋಜನೆಗಳು:
ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ನಡುವೆ 50:50ರ ಅನುಪಾತದಲ್ಲಿ ವೆಚ್ಚ ಹಂಚಿಕೆ ಆಧರಿಸಿ 9 ರೈಲು ಮಾರ್ಗ ಯೋಜನೆಗಳು ಪ್ರಗತಿಯಲ್ಲಿ ಇದ್ದು ಆದಷ್ಟು ಬೇಗ ಮುಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧವಾಗಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವರಾದ ಶ್ರೀ ವಿ.ಸೋಮಣ್ಣ ಅವರೊಂದಿಗೆ ಸಭೆ; ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ.

Post a Comment