ಲೋಕಾಯುಕ್ತ ಡಿವೈಎಸ್ಪಿ ಬಿ.ಎಲ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ದಾಳಿ ₹10 ಲಕ್ಷ ಲಂಚ ಪಡೆದ ಬಿಬಿಎಂಪಿ ಇಇ ಬಂಧನ!"
ಬೆಂಗಳೂರು ಬಿಬಿಎಂಪಿ ಇಇ ಬಂಧನ₹10 ಲಕ್ಷ ಲಂಚ ಪಡೆದ ಬಿಬಿಎಂಪಿ ಇಇ ಬಂಧನ
ಗುತ್ತಿಗೆದಾರರ ಬಿಲ್ ಪಾವತಿಸಲು ₹10 ಲಕ್ಷ ಲಂಚ ಪಡೆದ ಆರೋಪದ ಮೇಲೆ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ವಿ. ಯಾರಪ್ಪ ರೆಡ್ಡಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
'ಗುತ್ತಿಗೆದಾರ ಹೇಮಂತ್ ಜಿ.ಎಂ. ಬಿಬಿಎಂಪಿಯ ಸಿ.ವಿ. ರಾಮನ್ ನಗರ ವಿಭಾಗದಲ್ಲಿ ಹಲವಾರು ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಮತ್ತು ಬಿಲ್ ಬಾಕಿ ಇದೆ. ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲು ಕಾರ್ಯನಿರ್ವಾಹಕ ಎಂಜಿನಿಯರ್ ಯಾರಪ್ಪ ರೆಡ್ಡಿ ಅವರನ್ನು ಭೇಟಿ ಮಾಡಿದಾಗ, ಅವರು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ' ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ. ಬುಧವಾರ ಹೇಮಂತ್ ಯಾರಪ್ಪ ರೆಡ್ಡಿ ಅವರನ್ನು ಭೇಟಿ ಮಾಡಿ ₹10 ಲಕ್ಷ ನೀಡಿದರು. ಆಗ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು' ಎಂದು ಅದು ಹೇಳಿದೆ.
'ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್ಪಿ ಬಿ.ಎಲ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ನಡೆಸಲಾಯಿತು.................
Post a Comment