ಚಾಮರಾಜನಗರ ವರದಿ ಜಹೀರ್ ಅಹ್ಮದ್. ಕಾಂಗ್ರೆಸ್ ಪಕ್ಷದ ಮನುವಾದ ಮನಸ್ಥಿತಿ ಬಹಿರಂಗಗೊಂಡಿದೆ ಎಸ್.ಡಿ.ಪಿ.ಐ ಆರೋಪ
ಸಾಬ್ರಿಗೆ ಭೂಮಿಯ ಹಕ್ಕು ಕೊಟ್ಟರೆ, ಅಧಿಕಾರಿಗಳನ್ನು ನೇಣಿಗೆ ಹಾಕ್ತೀನಿ, ಎಂದು ಸಾರ್ವಜನಿಕವಾಗಿ ಕಂದಾಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ಶಾಸಕ ಸ್ಥಾನದ ತನ್ನ ಪ್ರಮಾಣವಚನವನ್ನು ಉಲ್ಲಂಘಿಸಿದ್ದರೂ ಎಂದು ಗುಡುಗಿದ ಅಬ್ರಾರ್ ಅಹ್ಮದ್.
ಶಾಸಕ ರಮೇಶ್ ಬಂಡಿ ಸಿದ್ದೇಗೌಡ ರವರ ಹೇಳಿಕೆ ಖಂಡಿಸಿ ಇಂದು ಎಸ್ ಡಿ ಪಿ ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಅವರ
ವಿರುದ್ಧ ದಿಕ್ಕಾರದ ಕೂಗು ಕೂಗಿತೊಡಗಿದರು..
ಈ ಸಂದರ್ಭದಲ್ಲಿ ಮಾತನಾಡಿ ಅವರು ಬಜರಂಗ ದಳದ ನಾಯಕನಿಗಿಂತ ಮಿಗಿಲಾಗಿ, ಮುಸ್ಲಿಂ ದ್ವೇಷವನ್ನು ಹೊರ ಹಾಕಿದ್ದಾರೆ. ತಾನೊಬ್ಬ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವುದನ್ನು ಮರೆತು, ಬೇಜಾವ್ದಾರಿತನದಿಂದ ವರ್ತಿಸಿದಲ್ಲದೇ, ತನ್ನ ಮನಸ್ಸಿನೊಳಗಿದ್ದ ಕೋಮು ವಿಷವನ್ನು ಸಾರ್ವಜನಿಕವಾಗಿ ಹೊರ ಹಾಕಿದ್ದಾರೆ. ಈ ಕೋಮುವಾದಿ ಶಾಸಕನನ್ನು ಅನರ್ಹಗೊಳಿಸಬೇಕು ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸ ಬೇಕು. ಸರ್ಕಾರಿ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದಲ್ಲದೇ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಈತನ ಕೃತ್ಯದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸ ಬೇಕು ಎಂದು SDPI ರಾಜ್ಯ ಸಮಿತಿ ಸದಸ್ಯರಾದ ಅಬ್ರಾರ್ ಆಹಮ್ಮದ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ನಯಾಜ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಮಹೇಶ್, ಸೖಯದ್ ಆರೀಫ್, ನಸ್ರುಲ್ಲಾ, ಸೖಯದ್ ಇರ್ಫಾನ್, ನಗರ ಘಟಕದ ಅಧ್ಯಕ್ಷರಾದ ಮಜರ್ ಖಾನ್ ಹಾಗೂ ದಲಿತ ಸಂಘರ್ಷ ಸಮಿತಿ ಹೋರಾಟಗಾರರಾದ ಸಂಘ ಸೇನಾ, ಬಂಗಾರ ಸ್ವಾಮಿ ಉಪಸ್ಥಿತರಿದ್ದರು.....


Post a Comment