ಔರಾದ್ ತಾಲೂಕಿನ ಸಂತಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಮೋಹರಂ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆ!!!
ಔರಾದ್ 25/06/25 ಆರಂಭ್ ಸುದ್ದಿ ಕನ್ನಡ ತಾಲೂಕಿನ ಸಂತಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಮೋಹರಂ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆ ಯಲ್ಲಿ ಪಿಎಸ್ ಐ ನಂದಕುಮಾರ್ ಮುಳೆ ಮಾತನಾಡಿದರು. ಮಂಜು ಸ್ವಾಮಿ, ಚಾಂದ್ ಪಾಶಾ, ತುಕಾರಾಮ್ ಹಸನ್ಮುಖಿ, ಸತೀಷ ಗೋಟಕೆ, ಫೀರೋಜ್, ಸಂದೀಪ್ ಟಿಳೆಕರ್, ಚುನ್ನುಮಿಯಾ ಇತರರಿದ್ದರು.
ಔರಾದ್ ಜುಲೈ ಮೊದಲನೆ ವಾರದಲ್ಲಿ ಬರುವ ಮೋಹರಂ ಹಬ್ಬವು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸಹೋದರತೆಯ ಪ್ರತೀಕವಾಗಿ ಆಚರಿಸಬೇಕು ಎಂದು ಸಂತಪುರ ಪೊಲೀಸ್ ಠಾಣೆಯ ಪಿ ಎಸ್ ಐ ನಂದಕುಮಾರ್ ಮುಳೆ ಹೇಳಿದರು.
ತಾಲೂಕಿನ ಸಂತಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಮೋಹರಂ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆಯನ್ನುದ್ದೇಶಿಸ ಮಾತನಾಡಿದ ಅವರು, ಮೋಹರಂ ಹಬ್ಬವು ಸರ್ವಧರ್ಮಿಯರು ಸೌಹಾರ್ದತೆಯಿಂದ ಆಚರಿಸಬೇಕು. ಕೋಮು ಗಲಭೆಗಳನ್ನು ಸೃಷ್ಟಿಸಿಕೊಂಡು ಹಬ್ಬ ಆಚರಿಸುವುದರಿಂದ ಧಾರ್ಮಿಕ ನಂಬಿಕೆಗಳು ದೂರವಾಗುತ್ತವೆ. ಯಾವುದೇ ಶಾಂತಿ ಭಂಗ ತರದಂತೆ ಹಬ್ಬ ಆಚರಿಸಬೇಕೆಂದರು.
ಯುವ ಮುಖಂಡ ಮಂಜು ಸ್ವಾಮಿ ಮಾತನಾಡಿ, ಅನೇಕತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯರಾದ ನಾವುಗಳು ಎಲ್ಲ ಹಬ್ಬಗಳನ್ನು ಪ್ರೀತಿ ಪ್ರೇಮದಿಂದ ಆಚರಿಸಿ ಎಲ್ಲರಿಗೂ ಆದರ್ಶರಾಗುವತ್ತಾ ಸಾಗಬೇಕಾಗಿದೆ ಎಂದರು. ಚಾಂದ್ ಪಾಶಾ, ತುಕಾರಾಮ್ ಹಸನ್ಮುಖಿ, ಸತೀಷ ಗೋಟಕೆ, ಫೀರೋಜ್, ಸಂದೀಪ್ ಟೀಳೆಕರ್, ಚುನ್ನುಮಿಯಾ, ಅಯೂಬ್, ಏಕನ್ನಾಥ, ರಾಮರೆಡ್ಡಿ, ಶ್ರೀಕಾಂತ, ಕೋಟ್ರೇಶ, ಇತರರಿದ್ದರು....


Post a Comment