ಆರಂಭ್ ಸುದ್ದಿ ಕನ್ನಡ


ಅಲೆಮಾರಿ
 ಸಮುದಾಯ,ಹಕ್ಕಿಪಿಕ್ಕಿಲೈಂಗಿಕ ಕಾರ್ಯಕರ್ತೆಯರ ಕುಟುಂಬಕ್ಕೆ ಹಕ್ಕುಪತ್ರ ನೀಡಿದ ಜಮೀರ್ ಅಹಮದ್ ಖಾನ್!!

ಬೆಂಗಳೂರು ವರ್ಷಗಳಿಂದ ಯಾವುದೇ ದಾಖಲೆ

 ಇಲ್ಲದೆ ವಾಸಿಸುತ್ತಿದ್ದ ಮೂರು ವಿಧಾನ ಸಭೆ ಕ್ಷೇತ್ರಗಳ 777 ಕುಟುಂಬಗಳಿಗೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರ ವಿತರಿಸಿದರು

ಇದೇ ಮೊದಲ ಬಾರಿಗೆ ಹಕ್ಕಿಪಿಕ್ಕಿ ಹಾಗೂ ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರು, 

ಕುಷ್ಟ ರೋಗ ದಿಂದ ಗುಣಮುಖ ರದ ಕುಟುಂಬ ಗಳಿಗೆ ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರ ನೀಡಿದ್ದು 


ಯಶವಂತಪುರ ಕ್ಷೇತ್ರದ ಯಲಚಗುಪ್ಪೆಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 228 ಕುಟುಂಬಗಳಿಗೆ ಹಾಗೂ ಮಾದಿಗರ ಚನ್ನಯ್ಯ ಸ್ಲಂ ನಲ್ಲಿ 259 ಹಕ್ಕುಪತ್ರ, ಇದೇ ಗ್ರಾಮದಲ್ಲಿ ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಲೆಮಾರಿ ಸಮುದಾಯದ 200 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ನೀಡಲಾಯಿತು.

ಯಲಹಂಕ ಕ್ಷೇತ್ರದ ಗಿಡ್ಡೇ ನಹಳ್ಳಿ ಗ್ರಾಮದ ಬಿಕೆ ಸ್ಲಂ ನಲ್ಲಿ 40 ಕುಟುಂಬಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು.

ರಾಜರಾಜೇಶ್ವರಿ ನಗರ ವಿಧಾನ ಸಭೆ ಕ್ಷೇತ್ರದ ಮಾತಾಪುರ ದಲಿತ ಕಾಲೋನಿಯಲ್ಲಿ ಕುಷ್ಟರೊಗದಿಂದ ಗುಣಮುಖರಾದ ಕುಟುಂಬಗಳಿಗೆ 50 ಮನೆ ಮಂಜೂರಾತಿ ಪತ್ರ ವಿತರಿಸಲಾಯಿತು.

ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಾಸಕ ಎಸ್. ಟಿ ಸೋಮಶೇಖರ್, ಕುಸುಮ ಹನುಮಂತರಾಯಪ್ಪ, ಸ್ಲಂ ಬೋರ್ಡ್ ಆಯುಕ್ತ ಅಶೋಕ್, ಚೀಫ್ ಎಂಜಿನಿಯರ್ ಸುಧೀರ್, ತಾಂತ್ರಿಕ ಸಲಹೆಗಾರ ಬಾಲರಾಜ್, ಸ್ಥಳೀಯ ಮುಖಂಡ ಗಣೇಶ್ ಉಪಸ್ಥಿತರಿದ್ದರು.

ಅಲೆಮಾರಿ ಕುಟುಂಬ ವಾಸಿಸುತ್ತಿದ್ದ ಶೆಡ್ ನಲ್ಲಿ ಊಟ ಮಾಡಿದ ಜಮೀರ್ ಅಹಮದ್ ಖಾನ್ 

ಯಶವಂತಪುರ ಕ್ಷೇತ್ರದ ಯಲಚಗುಪ್ಪೆ ಗ್ರಾಮದ ಮಾದಾರ ಚನ್ನಯ್ಯ ಸ್ಲಂ ನಲ್ಲಿ ಮನೆ ಮಂಜೂರಾತಿ ಪತ್ರ ವಿತರಿಸಿದ ಜಮೀರ್ ಅಹಮದ್ ಖಾನ್ ಅವರು ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರ ಜತೆ ಅಲ್ಲೇ ವಾಸಿಸುತ್ತಿದ್ದ ಅಲೆಮಾರಿ ಸಮುದಾಯದ ಶರಣಯ್ಯ ಎಂಬುವರ ಶೆಡ್ ನಲ್ಲಿ ಅವರ ಕುಟುಂಬ ಸದಸ್ಯರ ಜತೆ ಊಟ ಮಾಡಿದರು. 

ಶೆಡ್ ನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆದಷ್ಟು ಶೀಘ್ರ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಮ್ನ ಶೆಡ್ ನಲ್ಲಿ ಸಚಿವರು ಬಂದು ಊಟ ಮಾಡಿದ್ದು ನಮ್ಮ ಭಾಗ್ಯ. ನಾವು ಪ್ರೀತಿಯಿಂದ ಮಾಡಿದ್ದ ಅಡುಗೆ ಬಡಿಸುವಂತೆ ಕೇಳಿ ಊಟ ಮಾಡಿದರು. ಅವರ ಸರಳತೆಗೆ ಇದು ಸಾಕ್ಷಿ ಎಂದು ಶರಣಯ್ಯ ಹೇಳಿದರು...

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments