ಚಾಮರಾಜನಗರ ಬಿಳಿಗಿರಿರಂಗನ ಬೆಟ್ಟದ ಹತ್ತಿರ ಬಸ್ ಪಲ್ಟಿ ಗಾಯ ಯಾವುದೇ ಜೀವ ಅಪಾಯ ಇಲ್ಲ!!!
ಚಾಮರಾಜನಗರ ಜಿಲ್ಲೆ ಯಳಂದೂರು ಆರಂಭ್ ಸುದ್ದಿ ಕನ್ನಡ ವರದಿ ಜಹೀರ್ ಅಹ್ಮದ್ 08/7/25 ಬಿಳಿಗಿರಿರಂಗನ ಬೆಟ್ಟದ ಹತ್ತಿರ ಬಸ್ ಪಲ್ಟಿ ಹಲವರಿಗೆ ಗಾಯ ಯಾವುದೇ ಜೀವ ಅಪಾಯ ಆಗಲಿಲ್ಲ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿಪೋಡಿನ ಚೈನ್ ಗೇಟ್ ಬಳಿಯ ತಿರುವಿನಲ್ಲಿ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಬಸ್‌ನಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ ತುಮಕೂರು ಜಿಲ್ಲೆಯ ಮೂಲದವರು ಎನ್ನಲಾದವರು ಬಿಳಿಗಿರಿರಂಗನಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದು ದೇವರ ದರ್ಶನ ಮುಗಿಸಿ ವಾಪಸ್ಸು ತೆರಳುತ್ತಿದ್ದ ವೇಳೆ ಚೈನ್‌ಗೇಟ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ ಈ ವೇಳೆ ಬಸ್‌ನಲ್ಲಿದ್ದ ಹಲವರು ಗಾಯಗೊಂಡಿದ್ದು ವಿಷಯ ತಿಳಿದು ಸ್ಥಳಕ್ಕೆ ಯಳಂ ದೂರು ಠಾಣೆಯ ಪೊಲೀಸರು ತೆರಳಿ ಆಂಬುಲೆನ್ಸ್ ಗಳ ಮೂಲಕ ಯಳಂದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೋಲೀಸ್ ಇಲಾಖೆ ಯಿಂದ ಮಾಹಿತಿ ದೂರಕಿದೆ...
Post a Comment