ಚಾಮರಾಜನಗರ ಜಿಲ್ಲಾ ವಕ್ಫ್ ಸಮೀತಿಯ ಅಧ್ಯಕ್ಷ ಸೈಯದ್ ಇರ್ಷಾದ್ ಉಲ್ಲಾ ರವರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಇಂದು ನಗರದ ವಕ್ಫ್ ಮಂಡಳಿ ಕಛೇರಿಯ ಆವರಣದಲ್ಲಿ ಹಮ್ಮಿ ಕೊಳ್ಳಲಾಯಿತು..
ಚಾಮರಾಜನಗರ ಆರಂಭ ಸುದ್ದಿ ಕನ್ನಡ 04/07/25 ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ವಕ್ಫ್ ಮಂಡಳಿಗೆ ಸಂಬಂದಿಸದ ಯಾವುದೇ ಆಸ್ತಿಯನ್ನು ಸಂಪೊರ್ಣವಾಗಿ ರಕ್ಷಣೆ ಮಾಡುವ ಮೂಲಕ ರಾಜ್ಯ ಮಂಡಳಿಯ ವತಿಯಿಂದ ಮಂಜೂರಾಗುವ ಅನುದಾನಗಳನ್ನು ಸಂಬಂದಿಸಿದ ಮಸೀದಿ. ಈದ್ಗಾ. ಖಬ್ರಸ್ತಾನ್. ಮದ್ರೆಸಗಳಿಗೆ ಸಮರ್ಪಕವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ಎಲ್ಲ ಸದಸ್ಯರುಗಳ ಸಹಕಾರ ಅಗತ್ಯವಾಗಿದ್ದೆ ಹಾಗಾಗಿ ಎಲ್ಲರು ಕೈಜೋಡಿಸಿ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಕ್ರಮ ಕೈಗೂಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..ಸಭೆಯಲ್ಲಿ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಪಾಧ್ಯಕ್ಷ ಅಫ್ಸರ್ ಪಾಷ. ಸೈಯದ್ ಕಲಾಂ ಉಲ್ಲಾ ಷಾ. ಮಹಮ್ಮದ್ ಅಫ್ಜಲ್ ಶರೀಫ್. ಸಮೀವುಲ್ಲಾ. ಮನ್ಸೂರ್ ಅಲಿ. ಜಿಯಾವುಲ್ಲಾ. ಕಲೀಮುಲ್ಲಾ. ಅಲೀಮುಲ್ಲಾ. ವಕ್ಫ್ ಮಂಡಳಿ ಅಧಿಕಾರಿ ಆಸೀಫ್ ಖಾನ್. ತೌವಾಬ್ ಬೇಗ್. ರೂಮಾನ್ ಬೇಗ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು...
Post a Comment