ಆರಂಭ ಸುದ್ದಿ ಕನ್ನಡ

ಬೀದರ್ ಜಿಲ್ಲಾ ಔರಾದ್ ನಲ್ಲಿ ಪತ್ರಿಕಾ ದಿನಾಚರಣೆ ದೇವಯ್ಯ ಗುತ್ತೇದಾರ್‌ಗೆ ಕನ್ನಡ ಜಂಗಮ ಪ್ರಶಸ್ತಿ ಪ್ರದಾನ!!!!!!


www.arambhsuddikannada.com.

ಬೀದರ್ ಜಿಲ್ಲೆ ಔರಾದ್ ಸಾಮಾಜಿಕ ಜಾಲತಾಣದ ವ್ಯಾಪಕ ಬಳಕೆಯ ನಡುವೆಯೂ ಮುದ್ರಣ ಮಾದ್ಯಮದ ಮೇಲೆ ಈಗಲೂ ಜನ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ಕಲಬುರಗಿ ಆವೃತಿಯ ವಿಜಯ ಕರ್ನಾಟಕ ಪತ್ರಿಕೆಯ ಸಂಸ್ಥಾಪಕ ದೇವಯ್ಯ ಗುತ್ತೇದಾರ್ ಹೇಳಿದರು. ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಔರಾದ ತಾಲೂಕದಿಂದ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮುದ್ರಣ ಮಾದ್ಯಮದಲ್ಲಿ ಬಂದ ವರದಿಗಳು ಜನ ನಂಬುತ್ತಾರೆ. ಏಕೆಂದರೆ ಇಲ್ಲಿ ಬರುವ ವರದಿಗಳು ಜವಾಬ್ದಾರಿಯಿಂದ ಹಾಗೂ ವಾಸ್ತವಿಕತೆಯಿಂದ ಕೂಡಿರುತ್ತವೆ. ಸುಪ್ರೀಂ ಕೋರ್ಟ್ ಕುಡಾ ಮುದ್ರಣ ಮಾದ್ಯಮದ ಮೇಲೆ ವಿಶ್ವಾಸ ಇಟ್ಟಿಕೊಂಡಿರುವದಕ್ಕೆ ಅನೇಕ ಉದಾರಣೆಗಳಿವೆ ಎಂದು ವಿವರಿಸಿದರು. ಇಂದು ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಇದಕ್ಕಾಗಿ ಸಾಕಷ್ಟು ಜ್ಞಾನ ಬೇಕಾಗುತ್ತದೆ. ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೇ ಸಮಾಜ ಅವರಿಗೆ ಗೌರವ ಕೊಡುತ್ತದೆ ಎಂದರು.

ಎರಡು ದಶಕದ ಹಿಂದೆ ಮುದ್ರಣ ಮಾದ್ಯಮಕ್ಕೆ ಅವಕಾಶವಿಲ್ಲ ಎಂಬ ಭಾವನೆ ಮೂಡಿತ್ತು. ಆದರೆ ಸಾಮಾಜಿಕ ಜಾಲತಾಣದ ರಬಸದ ನಡುವೆಯೂ ಮುದ್ರಣ ಮಾದ್ಯಮ ತನ್ನ ಅಸ್ಥಿತ್ವ ಉಳಿಸಿಕೊಂಡಿದ್ದು, ೨೦೦೦ರಲ್ಲಿ ಒಟ್ಟು ಕನ್ನಡ ಪತ್ರಿಕೆಗಳ ಪ್ರಸಾರ ೪ ಲಕ್ಷ ಇದದ್ದು, ಇಂದು ೪೪ ಲಕ್ಷ ಆಗಿರುವುದು ಮುದ್ರಣ ಮಾದ್ಯಮದವರು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.

ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಈ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪತ್ರಕರ್ತ ದೇವಯ್ಯ ಗುತ್ತೇದಾರ್ ಅವರ ಪಾತ್ರ ಅಪಾರವಾಗಿದೆ. ಈ ಭಾಗದ ಅನೇಕ ಜ್ವಲಂತ ಸಮಸ್ಯೆಗಳು ಸರಕಾರದ ಗಮನಕ್ಕೆ ತಂದು ಧ್ವನಿ ಇಲ್ಲದವರಿಗೆ ಆಶ್ರಯವಾಗಿ ನಿಂತಿದ್ದಾರೆ. ಪತ್ರಿಕಾ ದಿನಾಚರಣೆಯಲ್ಲಿ ಅವರಿಗೆ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ (೭೫ನೇ ಜನ್ಮದಿನ) ಅಂಗವಾಗಿ ‘ಕನ್ನಡ ಜಂಗಮ’ ಪ್ರಶಸ್ತಿ ಪ್ರದಾನ ಮಾಡಿರುವುದು ಅತ್ಯಂತ ಪ್ರಸ್ತುತ ಎಂದರು. ಈ ಭಾಗದಲ್ಲಿ ಕನ್ನಡ ಹಾಗೂ ಕನ್ನಡ ಪತ್ರಿಕೆ ಉಳಿಯಲು ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಕೊಡುವೆ ಅಪಾರವಾಗಿದೆ. ಹಿರೇಮಠ ಸಂಸ್ಥಾನ ಇಷ್ಟೊಂದು ಹೆಮ್ಮರವಾಗಿ ಬೆಳೆಯಲು ಡಾ. ಬಸವಲಿಂಗ ಪಟ್ಟದ್ದೇವರ ಶ್ರಮ ಈ ಭಾಗದ ಭಕ್ತರಿಗೆ ಚನ್ನಾಗಿ ಗೊತ್ತಿದೆ ಎಂದರು.

ಮಾಜಿ ಎಂಎಲ್ಸಿ ವಿಜಯಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಔರಾದ್ ತಾಲೂಕಿನ ಜನ ಬಹಳ ಮುಗ್ಧವಾಗಿದ್ದಾರೆ. ನನ್ನ ರಾಜಕೀಯ ಜೀವನ ಇಲ್ಲಿಂದಲ್ಲೇ ಆರಂಭವಾಗಿದ್ದು, ನಾನು ವಿಧಾನ ಪರಿಷತ್ ಸದಸ್ಯನಾಗಲು ಇಲ್ಲಿನ ಜನರ ಕೊಡುಗೆ ಮರೆಯುವಂತಿಲ್ಲ. ಇಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ನಾನು ಪಾಲ್ಗೊಂಡಿರುವುದು ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿಕೆ ಗಣಪತಿ, ತಹಸೀಲ್ದಾರ ಮಹೇಶ ಪಾಟೀಲ್, ಸಂಘದ ಉಪಾಧ್ಯಕ್ಷ ನಾಗಶೇಟ್ಟಿ ಧರಂಪೂರೆ ಮಾತನಾಡಿದರು. ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೇದಾರ್ ಪ್ರಾಸ್ತವಿಕ ಮಾತನಾಡಿದರು. ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ತಾಪಂ ಇಒ ಶಿವಕುಮಾರ ಘಾಟೆ, ಜಿಲ್ಲಾ ಕಾರ್ಯದರ್ಶಿ ಪೃಥ್ವಿರಾಜ್ ಎಸ್, ಹಿರಿಯ ಪತ್ರಕರ್ತ ವಿಜಯಕುಮಾರ ಬೆಲ್ದೆ ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ, ಪತ್ರಕರ್ತರಾದ ಚನ್ನಬಸವ ಮೊಕ್ತೆದಾರ್, ಅನಿಲ ದೇಶಮುಖ, ಅಮರೇಶ್ವರ ಚಿದ್ರೆ, ಬಾಲಾಜಿ ಕುಂಬಾರ, ಸುಧೀರ್ ಪಾಂಡ್ರೆ, ಅಹ್ಮದ್ ಜಂಬಗಿ, ರವಿಕುಮಾರ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ವಿನೋದ ಚಿದ್ರೆ, ಪ್ರಭುಲಿಂಗ ಸ್ವಾಮಿ, ರಾಜಕುಮಾರ ಚಾಂಬೊಳೆ ಸೇರಿದಂತೆ ಅನೇಕರಿದ್ದರು. ಪತ್ರಕರ್ತ ಮನ್ಮಥಪ್ಪ ಸ್ವಾಮಿ ಸ್ವಾಗತಿಸಿದರು. ರಿಯಾಜ್‌ಪಾಶಾ ಕೊಳ್ಳುರ್, ಅಮರ ಸ್ವಾಮಿ ನಿರೂಪಿಸಿದರು. ಮಲ್ಲಪ್ಪ ಗೌಡಾ ವಂದಿಸಿದರು... www.arambhsuddikannada.com

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments