ಆರಂಭ ಸುದ್ದಿ ಕನ್ನಡ

ಔರಾದ್ ವಡಗಾಂವ ಗೌತಮ್ ಬುದ್ಧರ ಪ್ರತಿಮೆ ಲೋಕಾರ್ಪಣೆ ಭಗವಾನ್ ಬುದ್ಧನ ಆದರ್ಶದಿಂದ ವಿಶ್ವಶಾಂತಿ ಭಾಲ್ಕಿಯ ಪಟ್ಟದೇವರು!!!!


ಔರಾದ್ ಆರಂಭ ಸುದ್ದಿ ಕನ್ನಡ 04/07/2025ಇಡೀ ಮಾನವಕುಲಕ್ಕೆ ಶಾಂತಿ ಸಂದೇಶ ನೀಡಿದ ಗೌತಮ ಬುದ್ಧ ವಿಶ್ವಕ್ಕೇ ಗುರು ಅವರ ಆದರ್ಶಗಳಿಂದ ವಿಶ್ವಶಾಂತಿ ನೆಲೆಸಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಅಭಿಪ್ರಾಯಪಟ್ಟರು. 

ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಆಯೋಜಿಸಿದ್ದ 15 ಅಡಿ ಭಗವಾನ್ ಗೌತಮ ಬುದ್ಧರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೌತಮ ಬುದ್ಧ ಮಹಾರಾಜನ ಮಗನಾಗಿ ಜನಸಿದ್ದರೂ ಸರ್ವಸ್ವವನ್ನೂ ತ್ಯಜಿಸಿ ಮಾನವ ಜನಾಂಗದ ಕಷ್ಟಗಳಿಗೆ ಪರಿಹಾರವನ್ನು ಹುಡುಕಿ ಹೊರಟ ಸಿದ್ಧಾರ್ಥ ಗೌತಮಬುದ್ಧನಾಗಿ ತನ್ನ ತಂದೆಗೇ ಗುರುವಾದನು. ಮನುಷ್ಯನನ್ನು ಮನುಷ್ಯರಾಗಿ ಕಾಣುವುದೇ ನಿಜವಾದ ಧರ್ಮ. ಪ್ರತಿ ಜೀವಿಯನ್ನು ಪ್ರೀತಿಯಿಂದ ಕಾಣುವ ಮೂಲಕ ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಅಣದೂರಿನ ಪೂಜ್ಯಶ್ರೀ ಭಂತೆ ಜ್ಞಾನ ಸಾಗರ್ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಗೌತಮ ಬುದ್ಧನ ತತ್ವಗಳು, ಆಲೋಚನೆಗಳು ಇಂದಿಗೂ ಸಾಕಷ್ಟು ಜನರ ಜೀವನವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗಿದೆ. ಗೌತಮ ಬುದ್ಧರ ತತ್ವಗಳ ಪ್ರಕಾರ ನಾವು ನಮ್ಮ ಜೀವನವನ್ನು ನಡೆಸುವುದರಿಂದ ಯಶಸ್ವಿ ಜೀವನವನ್ನು ನಾವು ಸಾಧಿಸಬಹುದಾಗಿದೆ ಎಂದರು. 

ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಪ್ರತಿವರ್ಷ ತಾಯಂದಿರ ದಿನ ಹಾಗೂ ತನ್ನ ಜನ್ಮ ದಿನದ ಅಂಗವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ ಅವರ ಈ ಸಾಮಾಜಿಕ ಕಳಕಳಿ ಯುವ ಪೀಳಿಗೆಗೆ ಪ್ರೇರಣಾದಾಯಕವಾದದ್ದು, ಒಬ್ಬ ದೊಡ್ಡ ಅಧಿಕಾರಿಯಾದರು ಸರಳ ಜೀವನ ನಡೆಸುತ್ತ ತನ್ನದೇ ಆದ ಯುವ ಪಡೆ ನಿರ್ಮಿಸಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. 

ಶಿಕ್ಷಕ ಶಿವಲಿಂಗ ಹೆಡೆ ಅವರು ವಿಶೇಷ ಉಪನ್ಯಾಸ ನೀಡಿ ಗೌತಮ ಬುದ್ಧನ ತತ್ವಗಳು, ಆಲೋಚನೆಗಳು ಇಂದಿಗೂ ಸಾಕಷ್ಟು ಜನರ ಜೀವನವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗಿದೆ. ಗೌತಮ ಬುದ್ಧರ ತತ್ವಗಳ ಪ್ರಕಾರ ನಾವು ನಮ್ಮ ಜೀವನವನ್ನು ನಡೆಸುವುದರಿಂದ ಯಶಸ್ವಿ ಜೀವನವನ್ನು ನಾವು ಸಾಧಿಸಬಹುದಾಗಿದೆ. ಇದು ನಮ್ಮಲ್ಲಿ ಧನಾತ್ಮಕತೆಯನ್ನು ಕೂಡ ತುಂಬುವುದು. ಗೌತಮ ಬುದ್ಧರ ಬೋಧನೆಗಳು ನಮ್ಮನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತದೆ. ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಪ್ರತಿನಿತ್ಯದ ಜೀವನದಲ್ಲಿ ಗೌತಮ ಬುದ್ಧರ ಬೋಧನೆಗಳನ್ನು ಅನುಸರಿಸುವ ಮೂಲಕ ಸಕಾರಾತ್ಮಕತೆಯನ್ನು ಪಡೆಯಬಹುದು ಎಂದು ತಿಳಿಸಿದರು.ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಮಾತನಾಡಿ ಏಷ್ಯಾದ ಬೆಳಕು ಭಗವಾನ್ ಗೌತಮ ಬುದ್ಧರ ಪ್ರತಿಮೆ ನಿರ್ಮಾಣ ಬಹು ದಿನಗಳ ಕನಸಾಗಿತ್ತು ಇಂದು ಮೂರ್ತಿ ಲೋಕಾರ್ಪಣೆಗೊಂಡಿದ್ದು ಅತಿ ಸಂತೋಷ ತಂದಿದೆ. ಎಲ್ಲ ಮಹಾತ್ಮರ ಆಶೀರ್ವಾದ ಮತ್ತು ಎಲ್ಲಾ ಪೂಜ್ಯ ಗುರುಗಳು ಮಾರ್ಗದರ್ಶನ ಹಾಗೂ ಸ್ನೇಹಿತರು, ಗ್ರಾಮಸ್ಥರ ಸಹಕಾರದಿಂದ ಮಾತ್ರ ಈ ಕಾರ್ಯ ನೆರವೇರಿದೆ ಆ ಭಗವಂತನ ಕೃಪೆ ನಮ್ಮ ಸಮೂಹ ಹೀಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಲಿದೆ ಎಂದರು. 

ಈ ವೇಳೆ ಗೌತಮ ಬುದ್ಧರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯರನ್ನು ತೆರೆದ ಸಾರೋಟಿನಲ್ಲಿ ಹಾಗೂ ಎಲ್ಲಾ ಧರ್ಮಗಳ ಮಹಾನ ಪುರುಷರ ಭಾವಚಿತ್ರ ಮೂಲಕ ಮೆರವಣಿಗೆ ಮೂಲಕ ಸ್ವಾಗತಿಸಿದರು, ಪತ್ರಕರ್ತರಿಗೆ ಸನ್ಮಾನ, ವೈದ್ಯರಿಗೆ ಸನ್ಮಾನ ಜರುಗಿತು. 

ಈ ಸಂದರ್ಭದಲ್ಲಿ ನವದೆಹಲಿ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯಶ್ರೀ ಹವಾ ಮಲ್ಲಿನಾಥ ಮಹಾರಾಜರು ನಿರುಗುಡಿ, ಹಲ್ಬರ್ಗಾ ಮಠದ ಪೂಜ್ಯಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರ ತಾಯಿ ನಸೀಮಾ ಬೇಗಂ,ಬೀದರ್ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜು ಉಪನ್ಯಾಸಕರಾದ ಕುಮಾರಿ ಲತಾ ದಂಡೆ, ಗ್ರಾಮದ ಮುಖಂಡರಾದ ಶೌಕತ್ ಅಲಿ ಚಾಬುಕಸವಾಲ್, ವಡಗಾಂವ ವೈದ್ಯಾಧಿಕಾರಿ ಡಾ.ಸಿದ್ದಾರೆಡ್ಡಿ, ಶಿವಕುಮಾರ ಪಾಟೀಲ, ಮಲ್ಲಪ್ಪ ನೇಳಗೆ, ಮಲ್ಲಪ್ಪ ಬುಶೆಟ್ಟೆ, ಸಿದ್ದಯ್ಯ ಸ್ವಾಮಿ, ರಾಜಕುಮಾರ ಬುಟ್ಟೆ, ಪ್ರಕಾಶ ಅಗನೂರೆ, ಸೈದಪ್ಪ ಅಗನೂರೆ, ಅಶೋಕ್ ಅಡಿಕೆ, ಅಭಿಲಾಷ ಟೈಗರ್, ರಾಜು ಆಗನೂರೆ, ಶಫಿವುಲ್ಲಾ ಚಾಬುಕಸವಾರ್, ಓಂಕಾರ್ ಮೇತ್ರೆ, ನವೀಲಕುಮಾರ ಉತ್ಕಾರ್,ರತಿಕಾಂತ ನೇಳಿಗೆ, ಚಂದ್ರಕಾಂತ ಫುಲೆ, ಟಿ.ಎಂ ಮಚ್ಚೆ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು......


Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments