ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಮತ್ತು ಕೊಳ್ಳೇಗಾಲದ ತಾಲ್ಲೋಕಿನ 13 ನ್ಯಾಯಾಲಯಗಳಲ್ಲಿ ಲೋಕ ಅದಾಲತ್
ಆಯೋಜಿಸಲಾಗುವುದು ಜಿಲ್ಲಾ ನ್ಯಾಯಾಧೀಶರಾದ ಜಿ.ಪ್ರಭಾವತಿ ಮನವಿ!!!
ಚಾಮರಾಜನಗರ ಆರಂಭ ಸುದ್ದಿ ಕನ್ನಡ 09/7/25 ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಮೂಕದ್ದಮೆ ಗಳನ್ನು ಲೋಕ ಅದಾಲತ್ ಮೂಲಕ ಸರಳ ಹಾಗೂ ಯಾವುದೇ ಕರ್ಚಿಲ್ಲದೆ ಸುಖ್ಯಾತ ಗೋಳಿಸಲು ಅವಕಾಶ ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಮನವಿ ಮಾಡಿಕೊಂಡಿದ್ದಾರೆ ನಗರದ ಜಿಲ್ಲಾ ನ್ಯಾಯಾಲಯದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಲೋಕ್‌ಅದಾಲತ್ ವಿಶೇಷತೆ ವಿವರಿಸಿದ ಅವರು ಇದೇ ತಿಂಗಳ 12ರಂದು ಶನಿವಾರ ಜಿಲ್ಲೆಯಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಮತ್ತು ಕೊಳ್ಳೇಗಾಲದ ತಾಲ್ಲೋಕಿನ 13 ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಆಯೋಜಿಸಲಾಗುವುದು ಅದಾಲತ್‌ನಲ್ಲಿ ವಕೀಲರು, ಇಬ್ಬರು ಕಕ್ಷಿದಾರರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು...
ಇದರಿಂದ ಇಬ್ಬರು ಕಕ್ಷಿದಾರರು ನ್ಯಾಯಾಲಯಕ್ಕೆ ಅಲುಯುವುದು ತಪ್ಪುತ್ತದೆ ಹಣ ಮತ್ತು ಸಮಯ ಉಳಿತಾಯವಾಗಲಿದೆ ಎಂದರು.ಲೋಕ್ ಅದಾಲತ್ ಮೂಲಕಕ ಳೆದ ಬಾರಿ ಸುಮಾರು 74,307 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ಈ ಬಾರಿ ಇದಕ್ಕಿಂತ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ನ್ಯಾಯಾಲಯದಲ್ಲಿರುವ ರಾಜೀಯಾಗಬಹುದಾದ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜೀ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಭಾಗಿಯಾಗಿದ್ದರು......
Arambh Suddi Kannada News True Newses And Stories Telecasting
Experienced journalist focused on global news, trends, and untold stories — with a commitment to accuracy and impact.
Post a Comment