ಔರಾದ್ ತಾಲೂಕಿನ ಸಂತಪುರ್ ನಲ್ಲಿ ಪತ್ರಿಕಾ ದೇನಾಚರಣೆ ಸದೃಢ ಸಮಾಜ ನಿರ್ಮಾಣದಲ್ಲಿ ಪತ್ರಿಕೆ ಪಾತ್ರ ದೊಡ್ಡದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು!!!!!
ಬೀದರ್ ಜಿಲ್ಲಾ ಔರಾದ್ಸು ತಾಲೂಕಿನ ಸಂತಪುರ್ ಆರಂಭ ಸುದ್ದಿ ಕನ್ನಡ 28-07-25 ಔರಾದ್ ಸ್ವಾಸ್ತ್ಯ ಸಮಾಜ ಕಟ್ಟುವಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ದೊಡ್ಡದು ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ರಂಗವು ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ನುಡಿದರು.
ತಾಲೂಕಿನ ಸಂತಪುರ ಶ್ರೀ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ಪತ್ರಕರ್ತರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವುದು ಅಭಿನಂದನೀಯ ಕಾರ್ಯ ಎಂದು ತಿಳಿಸಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜುಕುಮಾರ್ ಜುಮ್ಮಾ ಮಾತನಾಡಿ, ಕನ್ನಡ ಬೆಳೆಯಲು ಪತ್ರಕರ್ತರ ಶ್ರಮ ಬಹಳ ಆಳವಾಗಿ ಅಡಗಿದೆ. ಇಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರ ಸೇವೆ ಅನನ್ಯವಾಗಿದೆ . ಕನ್ನಡ ಉಳಿಸಲು ಬೆಳೆಸಲು ಭಾಲ್ಕಿ ಮಠದ ಕಾರ್ಯ ಅಮೋಘ ವಾಗಿದೆ. ಹಿಂದಿನಿಂದ ಹಿಡಿದು ಇಲ್ಲಿವರೆಗೆ ಪತ್ರ ಕರ್ತರು ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿರುವುದು ಉತ್ತಮ ಸಂಗತಿಯಾಗಿದೆ ಎಂದರು ಇದೇ ಸಂದರ್ಭದಲ್ಲಿ ಎಲ್ಲಾ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಪ್ರಾಂಶುಪಾಲ ನವಿಲಕುಮಾರ್ ಉತ್ಕಾರ, ಗುರುಪ್ರೀತ್ ಕೌರ್, ಶರಣಪ್ಪ ಚೀಟ್ಮೆ, ಮನ್ಮಥಪ್ಪ ಸ್ವಾಮಿ, ಮಲ್ಲಪ್ಪ ಗೌಡ, ಅಮರಸ್ವಾಮಿ ಸ್ಥಾವರಮಠ, ಶಿವಕುಮಾರ ಬಿರಾದಾರ್, ಅಂಬದಾಸ ನಳಗೆ, ಅಹಮದ ಜಂಬಗಿ, ಸೂರ್ಯಕಾಂತ, ಶಿವಕುಮಾರ ಸಾದುರೆ, ಅಲೀಮ್ ಪಾಶಾ, ಪ್ರಭುಲಿಂಗ ಮಠಪತಿ, ರವಿ, ಸುಧಾ, ಮಿರಾ ತಾಯಿ, ಅಶ್ವಿನಿ, ವನದೇವಿ, ಸುಧೀರ್, ಜಿತೇಂದ್ರ, ರಾಜಕುಮಾರ್, ಸುರೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು... www.arambhsuddikannada.com..-Arambhsuddi News Network private Limited..

Post a Comment