ಬೆಂಗಳೂರು ನಗರದ ಖಾಸಗಿ ಹೋಟೆಲ್ ನಲ್ಲಿ VCN ಡಾಕ್ಟರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ವೈದ್ಯರದಿನಾಚರಣೆ!!!
ಬೆಂಗಳೂರು ಆರಂಭ ಸುದ್ದಿ ಕನ್ನಡ ಜುಲೈ 28 2025,ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವೈದ್ಯರನ್ನು ಗುರುತಿಸಿ ಅವರಿಗೆ ಸಚಿವ ದಿನೇಶ್ ಗುಂಡುರಾವ್ ಸನ್ಮಾನ ಮಾಡಿದರು ಇಂದಿನ ಆಧುನಿಕ ಜಗತ್ತಿನಲ್ಲಿ ವೈದ್ಯಕೀಯ ಕ್ಷೇತ್ರದ ಅಗತ್ಯತೆ ಹೆಚ್ಚಾಗುತ್ತಲ್ಲೇ ಇದೆ. ವೈದ್ಯಕೀಯ ಕ್ಷೇತ್ರದ ಹೊಸ ಹೊಸ ಸಂಶೋಧನೆಗಳಿಂದ ಹಲವಾರು ಸಮಸ್ಯೆಗಳಿಗೂ ಪರಿಹಾರ ಸಿಗುತ್ತಿದೆ. 30 ರಿಂದ 40 ವರ್ಷಗಳ ಹಿಂದೆ ಇಷ್ಟೊಂದು ತಾಂತ್ರಿಕತೆ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಆದರೆ ಇಂದು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ಉದ್ಭಗೊಳ್ಳುತ್ತಿದೆ. ನಮ್ಮ ದೇಶದಲ್ಲಿಯೇ ಕರ್ನಾಟಕ ರಾಜ್ಯ ತನ್ನ ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ವೈದ್ಯರ ಅಸೋಸಿಯೇಷನ್ ವತಿಯಿಂದ ಕೈಗೊಳ್ಳುತ್ತಿರುವ ಈ ಅಭಿನಂದನೆಯ ಕಾರ್ಯಕ್ರಮ ವೈದ್ಯರಿಗೆ ಇನ್ನಷ್ಟು ಉತ್ತೇಜನ ನೀಡಲಿದೆ. ಇದರಿಂದ ನಿಮ್ಮ ಸಂಘಟನೆ ಇನ್ನಷ್ಟು ಬಲಿಷ್ಠವಾಗುತ್ತದೆ. ನಮ್ಮ ಸರ್ಕಾರ ಬಂದ ನಂತರ ವೈದ್ಯರಿಗಾಗಿ ಸಾಕಷ್ಟು ಕಾನೂನುಗಳನ್ನು ತಂದಿದ್ದೇವೆ. ವೈದ್ಯರ ಮೇಲಿನ ಹಲ್ಲೆ ಅಥವಾ ಕರ್ತವ್ಯನಿರತ ವೈದ್ಯರು, ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದಲ್ಲಿ ಅತಂಹ ವ್ಯಕ್ತಿಗೆ ಕಠಿಣವಾದ ಶಿಕ್ಷೆಯ ಜೊತೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು ಪ್ರಸ್ತುತ ದುಪ್ಪಟ್ಟು ಮಾಡಲು ಕ್ರಮ ಕೈಗೊಂಡಿದ್ದೇವೆ.ವೈದ್ಯರಿಗೂ ಅವರದ್ದೇ ಆದ ಮಾನಸಿಕ ಒತ್ತಡಗಳಿವೆ, ಅವುಗಳ ಮಧ್ಯೆಯು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ದಿನಂಪ್ರತಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆಗಳನ್ನು ಜನರಿಗೆ ನೀಡಿ ಸಮಾಜದಲ್ಲಿ ಗುರ್ತಿಸಿಕೊಂಡಿದ್ದ ವೈದ್ಯರಿಗೆ ಇಂದು ಸನ್ಮಾನಿಸಿದೆನು. ಸನ್ಮಾನ ಸ್ವೀಕರಿಸಿದ ಎಲ್ಲಾ ವೈದ್ಯರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ... Arambhsuddikannada. com

Post a Comment