ಶ್ರೀಮತಿ ಇಂದಿರಾಗಾಂಧಿ ಕಾಂಗ್ರೆಸ್ ಭವನಕ್ಕೆ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ಇಂದಿರಾ ಗಾಂಧಿ ಭವನದ ನಿರ್ಮಾಣ ಕಾರ್ಯ ಒಂದು ವರ್ಷದಲ್ಲಿ ಮುಗಿಯಬೇಕು ಸಿಎಂ ಸಿದ್ದರಾಮಯ್ಯ!!!
𝗪𝗪𝗪.𝗔𝗥𝗔𝗠𝗕𝗛𝗦𝗨𝗗𝗗𝗜𝗞𝗔𝗡𝗡𝗔𝗗𝗔.𝗖𝗢𝗠 ಮೈಸೂರು ಆಗಸ್ಟ್ 09 ಆರಂಭಸುದ್ದಿ ಕನ್ನಡ ಕಾಂಗ್ರೆಸ್ ಪಕ್ಷದ ಶ್ರೀಮತಿ ಇಂದಿರಾ ಗಾಂಧಿ ಭವನದ ನಿರ್ಮಾಣ ಕಾರ್ಯ ಒಂದು ವರ್ಷದಲ್ಲಿ ಮುಗಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು ಅವರು ಇಂದು ಶ್ರೀಮತಿ ಇಂದಿರಾಗಾಂಧಿ ಕಾಂಗ್ರೆಸ್ ಭವನದ ಭೂಮಿ ಪೂಜೆ ನೆರೆವೇರಿಸಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರುಗ್ರಾಮೀಣ ಮತ್ತು ನಗರ ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ದೇವರಾಜ ಅರಸು ಅವರ ಕಾಲದಲ್ಲಿ ಈ ಭೂಮಿಯಲ್ಲಿ ನೀಡಲಾಗಿತ್ತು. ತಿವಾರಿಯವರು ಅವರು ಇದನ್ನು ಜೋಪಾನ ಮಾಡಿದ್ದು, ಕಾಂಗ್ರೆಸ್ ಭವನಕ್ಕೆ ಸಂಕುಸ್ಥಾಪನೆಯಾಗಿರುವುದು ಸಂತೋಷದ ವಿಷಯ ಎಂದರು ಶಕ್ತಿ ಮೀರಿ ಎಲ್ಲರೂ ವಂತಿಗೆ ನೀಡಬೇಕು*
ಕಾಂಗ್ರೆಸ್ಸಿನ ಮುಖಂಡರು, ಕಾರ್ಯಕರ್ತರು, ಅಧ್ಯಕ್ಷರು, ಮಹಿಳೆಯರಿಗೆ, ಅನುಕೂಲವಾಗುವ ಭವ್ಯ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿದೆ.ಇದಕ್ಕೆ ಶಕ್ತಿ ಮೀರಿ ಎಲ್ಲರೂ ವಂತಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು ಕಾರ್ಯಕರ್ತರ ವಂತಿಗೆ ಹಣದಿಂದಲೇ ಈ ಭವನ ನಿರ್ಮಾಣವಾಗುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಅವರು ಕಟ್ಟಡ ಸಮಿತಿಗೆ ಸಂಚಾಲಕರಾಗಿದ್ದು, ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಶ್ರಮ ಹಾಗೂ ಮುತುವರ್ಜಿ ವಹಿಸಿ ಕಟ್ಟಡವನ್ನು ಒಂದು ವರ್ಷದೊಳಗೆ ನಿರ್ಮಾಣವಾಗುವಂತೆ ವ್ಯವಸ್ಥೆ ಮಾಡಬೇಕು. ಕಾರ್ಯಕರ್ತರು ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಬೇಕು ಎಂದರು.
ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಶ್ರೀಮತಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಭವನ ನಿರ್ಮಾಣವಾಗುತ್ತಿದೆ.
ಕಾಂಗ್ರೆಸ್ಸಿನ ಎಲ್ಲಾ ಮುಖಂಡರು ಶಕ್ತ್ಯಾನುಸಾರ ದೇಣಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಾಜಿ ಶಾಸಕ ಮಂಜುನಾಥ್ ಅವರ ತಂದೆ ಪ್ರೇಮ್ ಕುಮಾರ್ ಅವರು ಐದು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದು, ಅವರಿಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದರು.www.Arambhsuddikannada.com

Post a Comment