ಬೀದರ್ ಜಿಲ್ಲಾ ಔರಾದ್ ಪತ್ರಿಕಾ ದಿನಾಚರಣೆ ಕಾರ್ಯಕ್ರಮಪ ತ್ರಿಕೆಗಳು ಸಮಾಜಕ್ಕೆ ಬೆಳಕು ಶೆಂಬೆಳ್ಳಿ!!!!
𝗪𝗪𝗪. 𝗔𝗥𝗔𝗠𝗕𝗛𝗦𝗨𝗗𝗗𝗜𝗞𝗔𝗡𝗡𝗔𝗗𝗔. 𝗖𝗢𝗠
ಬೀದರ್ ಜಿಲ್ಲಾ ಔರಾದ್ 12-08-2025 ಆರಂಭ ಸುದ್ದಿ ಕನ್ನಡ ಪತ್ರಕರ್ತರ ಸೇವೆ ಅನನ್ಯ ಹಾಗೂ ಪತ್ರಿಕೆಗಳು ಸಮಾಜಕ್ಕೆ ಬೆಳಕು ನೀಡುತ್ತಿವೆ ಎಂದು ಹಿರಿಯ ಪತ್ರಕರ್ತ ಶಶಿಕಾಂತ ಎಸ್ ಶೆಂಬೆಳ್ಳಿ ಹೇಳಿದರು. ಪಟ್ಟಣದ ಪತ್ರಿಸ್ವಾಮಿ ಪಿಯುಸಿ ಕಾಲೇಜಿನಲ್ಲಿ ಸೋಮವಾರ ಸುಭಾಷ್ ಚಂದ್ರ ಬೋಸ್ ಯುವಕ ಸಂಘದಿAದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಅನಾದಿ ಕಾಲದಿಂದಲೂ ಸಮಾಜದಲ್ಲಿ ಮಾಧ್ಯಮ ಕ್ಷೇತ್ರ ತನ್ನದೆಯಾದ ಜವಾಬ್ದಾರಿ ಉಳಿಸಿಕೊಂಡಿದ್ದು, ಪತ್ರಿಕಾ ರಂಗದಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಓರೆ ಕೋರೆಗಳನ್ನು ತಿದ್ದುವ ಜತೆಗೆ ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು. ಮಾಜಿ ಶಾಸಕ ಗುಂಡಪ್ಪ ವಕೀಲ್ ಮಾತನಾಡಿ, ಪತ್ರಕರ್ತರ ಸೌಲಭ್ಯಗಳಿಲ್ಲದೇ, ದಿನವಿಡಿ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ಸಮಾಜದ ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದರು. ಇಲಾಖೆಯ ಯೋಜನೆಗಳು ಜನರ ಬಾಗಿಲಿಗೆ ಮುಟ್ಟಿಸುವಂತಹ ಕೆಲಸ ಪತ್ರಿಕೆಗಳು ಮಾಡುತ್ತಿವೆ. ಪತ್ರಿಕೆಗಳ ವರದಿಯಿಂದ ಅನೇಕ ಬದಲಾವಣೆಗಳು ಆಗುತ್ತಿದೆ ಎಂದು ಪತ್ರಕರ್ತರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಪತ್ರಕರ್ತರು ಹಲವಾರು ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಅಭಿವೃದ್ಧಿ ಪರ ವಿಚಾರಗಳಿಗೆ ಒತ್ತು ನೀಡಬೇಕು ಎಂದರು. ಮುಖಂಡ ಬಂಡೆಪ್ಪ ಕಂಟೆ ಮಾತನಾಡಿ, ತಾಲೂಕಿನ ಪತ್ರಕರ್ತರು ನಿತ್ಯ ವಿನೂತನ ರೀತಿಯಲ್ಲಿ ವರದಿ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಪತ್ರಕರ್ತರ ಸೇವೆ ಅನನ್ಯ ಎಂದು ಕೊಂಡಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪತ್ರಕರ್ತ ಅನಿಲಕುಮಾರ ದೇಶಮುಖ ಮಾತನಾಡಿದರು. ಸುಭಾಷ ಚಂದ್ರ ಬೋಸ್ ಯುವಕ ಸಂಘದ ತಾಲೂಕು ಅಧ್ಯಕ್ಷ ರತ್ನದೀಪ ಕಸ್ತೂರೆ ಪ್ರಾಸ್ತವಿಕ ಮಾತನಾಡಿದರು.
ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ಪತ್ರಕರ್ತರಾದ ಜಾನಸನ್ ಘೋಡೆ, ಚನ್ನಬಸವ ಮೊಕ್ತೆದಾರ, ಮನ್ಮಥಪ್ಪ ಸ್ವಾಮಿ, ಮಲ್ಲಪ್ಪ ಗೌಡಾ, ರವೀಂದ್ರ ಮೊಕ್ತೆದಾರ್, ಅಮರೇಶ್ವರ ಚಿದ್ರೆ, ಹಣಮಂತ ದೇಶಮುಖ, ಸುಧೀರ್ ಪಾಂಡ್ರೆ, ಅಹ್ಮದ್ ಜಂಬಗಿ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ್, ಅಂಬಾದಾಸ ನಳಗೆ, ಪ್ರಭುಲಿಂಗ ಸ್ವಾಮಿ ಸೇರಿದಂತೆ ಅನೇಕರಿದ್ದರು. ಅಮರ ಸ್ವಾಮಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಅಖಿಲ್ ವಂದಿಸಿದರು.𝗪𝗪𝗪. 𝗔𝗥𝗔𝗠𝗕𝗛𝗦𝗨𝗗𝗗𝗜𝗞𝗔𝗡𝗡𝗔𝗗𝗔. 𝗖𝗢𝗠

Post a Comment