ಬೆಂಗಳೂರು ಸಚಿವ ಜಮೀರ್ ಅಹಮದ್ ಖಾನ್ ವಸತಿ ವಾಖ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇವರು ಕಾರ್ಯಕರ್ತರು ಅಭಿಮಾನಿಗಳು ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ!!!!
ಬೆಂಗಳೂರು ಆರಂಭ ಸುದ್ದಿ ಕನ್ನಡ ಆಗಸ್ಟ್ 01 2025 ವಸತಿ ವಾಖ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ರಾಜ್ಯದೆಲ್ಲೆಡೆಯಿಂದ ಆಗಮಿಸಿದ ಮುಖಂಡರು,ಕಾರ್ಯಕರ್ತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು.ಸರ್ಕಾರಿ ನಿವಾಸದಲ್ಲಿ ಕೆ ಎಂ ಡಿಸಿ ಅಧ್ಯಕ್ಷ ಬಿಕೆ ಅಲ್ತಾಫ್ ಖಾನ್, ಎ ಐ ಸಿಸಿ ತೆಲಂಗಾಣ ಉಸ್ತುವಾರಿ ಶಕೀಲ್ ನವಾಜ್,ಮುಜಹಿದ್ ನೇತೃತ್ವದಲ್ಲಿ ಕ್ರೇನ್ ಮೂಲಕ ಬೃಹತ್ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ಶುಭ ಹಾರೈಸಿದರು.
ಜಮೀರ್ ಅಹಮದ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮುಸ್ಕಾನ್ ಖಾನ್, ಉಸನಾ ಖಾನ್ ಹಾಗೂ ಶಾನ್ ಖಾನ್ ನೇತೃತ್ವದಲ್ಲಿ ಎಂ ಕೆ ಇ ಫೌಂಡೇಶನ್ ವತಿಯಿಂದ 40 ಬಡ ಮಕ್ಕಳಿಗೆ ಸಚಿವರು ತಲಾ 40 ರಿಂದ 50 ಸಾವಿರ ದವರೆಗೆ ಶಾಲಾ ಶುಲ್ಕ ಪಾವತಿ ಸಲು ಚೆಕ್ ವಿತರಿಸಿದರು.
ಬೆಂಗಳೂರು ಸೇರಿದಂತೆ ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ರಾಯಚೂರು, ಕಲಬುರಗಿ, ರಾಮನಗರ, ಕೋಲಾರ, ತುಮಕೂರು,ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಹಾಸನ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಮೀರ್ ಅಹಮದ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆ ಗಳಲ್ಲಿ ಹಣ್ಣು ಹಂಪಲು, ಬ್ರೆಡ್ ವಿತರಿಸಲಾಯಿತುಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಖಾನ್ ಅವರ ಹುಟ್ಟುಹಬ್ಬದ ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ್, ಮುಖಂಡರಾದ ಡಿಸಿ ರಮೇಶ್,ಅಪ್ಪೋಡ ಚಂದ್ರಶೇಖರ್, ಆತುಶ್, ಗಜೇಂದ್ರ,ಸಚಿವರ ಆಪ್ತ ಸಹಾಯಕರಾದ ಅಯೂಬ್ ಖಾನ್, ಅಮೀರ್ ಖಾನ್ ಅವರು ತವಕ್ಕಲ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ವಾಣಿ ವಿಲಾಸ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣು, ಹೊದಿಕೆ, ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಿಸಿದರು.
ಸಂಗಮ್ ವೃತ್ತದಲ್ಲಿ ಮುಜಾಮಿಲ್ ನೇತೃತ್ವದಲ್ಲಿಮೂರು ಸಾವಿರ ಮಂದಿಗೆ ಉಪಹಾರ ಆಯೋಜಿಸಲಾಗಿತ್ತು. ರಾಜ್ಯದ ದಲಿತ ಸಂಘಟನೆ ಗಳಿಂದ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಜಮೀರ್ ಅಹಮದ್ ಖಾನ್ ಅವರ ಹುಟ್ಟುಹಬ್ಬ ಆಚರಿಸಿ ವಿಶೇಷ ವಾಗಿ ಗೌರವಿಸಲಾಯಿತು.www.arambhsuddikannada.com

Post a Comment