ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಂದಾಜಿನಂತೆ ಸುಮಾರು ₹500 ಕೋಟಿ ರೂ.ನಷ್ಟ ಸಂಭವಿಸಿದೆ ಜಿಲ್ಲೆಗೆ ತುರ್ತು ನೆರವಿನ ₹100 ಕೋಟಿ ರೂ.ವಿಶೇಷ ಪರಿಹಾರ ನೀಡುವಂತೆ ಸಚಿವರು ಈಶ್ವರ್ ಖಂಡ್ರೆ ಮನವಿ!!!
www.arambhsuddikannada.comಬೆಂಗಳೂರು ಆರಂಭ ಸುದ್ದಿ ಕನ್ನಡ 31-08-2025 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಸಚಿವರು ಈಶ್ವರ್ ಖಂಡ್ರೆ ಆಗಸ್ಟ್ ತಿಂಗಳಲ್ಲಿ ಬೀದರ್ ಜಿಲ್ಲೆಯಾದ್ಯಂತ ಸುರಿದ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ತೊಗರಿ, ಸೋಯಾಬೀನ್ ಸೇರಿದಂತೆ ಸಾವಿರಾರು ಎಕರೆಯ ಬೆಳೆ ಹಾನಿಯಾಗಿದ್ದು, ನೂರಾರು ಮನೆಗಳು, ರಸ್ತೆ–ಸೇತುವೆಗಳು ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿ ಎಂದು ಮುಖ್ಯಮಂತ್ರಿ ಅವರಿಗೆ ಮಾನ್ವಿ ಪತ್ರ ನೀಡಿದರು
ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯ ಪ್ರಾಥಮಿಕ ಅಂದಾಜಿನಂತೆ ಸುಮಾರು ₹500 ಕೋಟಿ ರೂ. ನಷ್ಟ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೀದರ್ ಉಸ್ತುವಾರಿ ಸಚಿವರು ಈಶ್ವರ್ ಖಂಡ್ರೆ ಜಿಲ್ಲೆಗೆ ತುರ್ತು ನೆರವಿನ ಭಾಗವಾಗಿ ₹100 ಕೋಟಿ ರೂ. ವಿಶೇಷ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ.
ಈ ಕಷ್ಟದ ಸಮಯದಲ್ಲಿ ಜಿಲ್ಲೆಯ ರೈತರು, ಕೂಲಿಕಾರ್ಮಿಕರು ಹಾಗೂ ಬಡಜನರಿಗೆ ಸರ್ಕಾರದಿಂದ ತಕ್ಷಣ ಸಹಾಯ ದೊರಕುವಂತೆ ಪ್ರಯತ್ನಿಸುತ್ತಿದ್ದೇನೆ.. www.arambhsuddikannada.com
Post a Comment