ಔರಾದ್ತಾ ತಾಲ್ಲೂಕಿನ ಜಂಬಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಅಭಂಗರಾವ್ ತಾಡಮಲ್ಲೆ ಅವರನ್ನು ಅವಿರೋಧವಾಗಿ ಆಯ್ಕೆ!!!
www.arambhsuddikannad.comಬೀದರ್ ಆರಂಭ ಸುದ್ದಿ ಕನ್ನಡ 12 sept ಜಿಲ್ಲಾ ಔರಾದ್ ತಾಲ್ಲೂಕಿನ ಜಂಬಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಅಭಂಗರಾವ್ ತಾಡಮಲ್ಲೆ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಪನ್ಮೂಲ ವ್ಯಕ್ತಿ ರವೀಂದ್ರ ಡಿಗ್ಗಿ ಮಾತನಾಡಿ, ಶಾಲೆಗಳಿಗೆ ಎಸ್‌ಡಿಎಂಸಿ ಸದಸ್ಯರು ಆಧಾರ ಶಿಲೆಯಾಗಿ ಕಾರ್ಯ ಮಾಡುತ್ತಿದ್ದಾರೆ. ಶಾಲೆಯ ಉನ್ನತೀಕರಣದಲ್ಲಿ ಇವರ ಪಾತ್ರ ಪ್ರಮುಖವಾದದ್ದಾಗಿದೆ ಎಂದರು ಮುಖ್ಯಗುರು ಉಮಾ ಪಾಟೀಲ್ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಮತ್ತು ಎಸ್ ಡಿ ಎಂ ಅಧ್ಯಕ್ಷ ಮತ್ತು ಸದಸ್ಯರು ಸೇರಿಕೊಂಡು ಒಮ್ಮತದಿಂದ ಕಾರ್ಯ ಮಾಡಿದರೆ ಶಾಲೆಯ ಉನ್ನತಿಕರಣದ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಆಗುತ್ತದೆ ಎಂದರು. ಅಭಂಗರಾವ್ ತಾಡಮಲ್ಲೆ ಅವಿರೋಧ ಆಯ್ಕೆ ಎಸ್ ಡಿ ಎಂ ಸಿ ಅಧ್ಯಕ್ಷ ರು ಮಾತನಾಡಿ, ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಶಿಕ್ಷಣದ ಗುಣಮಟ್ಟ ಕಾಪಾಡಲು ನನ್ನ ಕೈಲಾದಷ್ಟು ಶ್ರಮಿಸುವೆ. ಎಸ್ ಡಿ ಎಂ ಸದಸ್ಯರು ಮತ್ತು ಶಾಲೆಯ ಶಿಕ್ಷಕರ ಮನಗೆದ್ದು ಮಕ್ಕಳ ಶಿಕ್ಷಣದ ಅಭಿವೃದ್ಧಿ ಗೆ ದುಡಿಯುತ್ತೇನೆ ಎಂದರು.
ಬಾಲಾಜಿ ಪಾಟೀಲ್, ದತ್ತಾತ್ರಿ ಗಾಯಕವಾಡ, ಶಿವಾಜಿ ಪಾಟೀಲ್, ಮೊಬಿನ್, ಕೌಶಬಾಯಿ, ವಿಠ್ಠಲ್ ರಾವ್ ಬುಧರೆ, ಇತರರಿದ್ದರು.... ಈ ವರದಿ ಅಹ್ಮದ್ ಜಂಬಗಿ, ಔರಾದ್ WWW.ARAMBHSUDDIKANNADA.COM
Post a Comment