ಆರಂಭ ಸುದ್ದಿ ಕನ್ನಡ

 

ರಸ್ತೆಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧ ಡಿ.ಕೆ.ಶಿವಕುಮಾರ 7 ವಿರ ಗುಂಡಿ ಮುಚ್ಚಿದ್ದು, 5 ಸಾವಿರ ಗುಂಡಿ ಬಾಕಿ ಇವೆ

ಅನುದಾನ ಕೊಟ್ಟರೂ ಬಿಜೆಪಿ ಶಾಸಕರು ಗುಂಡಿ ಮುಚ್ಚಿಲ್ಲ ಯಾಕೆ?

ಬೆಂಗಳೂರು, ಸೆ.20:ರಸ್ತೆಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದು, ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜಕೀಯ ಮಾಡುವವರು ಮಾಡಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯಿಸಿದರು.

"ಯಾರೂ ಸಹ ಉದ್ದೇಶಪೂರ್ವಕವಾಗಿ ರಸ್ತೆಗುಂಡಿಗಳನ್ನು ಮಾಡುವುದಿಲ್ಲ. ಅತಿಯಾದ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗಿವೆ. 7 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ 5 ಸಾವಿರದಷ್ಟು ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ಈ ಕಾರಣಕ್ಕೆ ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಲಾಗಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹ ರಸ್ತೆಗುಂಡಿಗಳು ಕಂಡರೆ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ" ಎಂದು ತಿಳಿಸಿದರು.

*ಬಿಜೆಪಿ ಶಾಸಕರು ಗುಂಡಿ ಮುಚ್ಚಿಲ್ಲ ಯಾಕೆ?*

"ಬಿಜೆಪಿಯವರು ರಸ್ತೆ ತಡೆಯದರೂ ಮಾಡಲಿ, ಬೇರೆ ಏನಾದರೂ ಮಾಡಲಿ. ಪ್ರತಿಯೊಬ್ಬ ಬಿಜೆಪಿ ಶಾಸಕನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯ ಇಲ್ಲದೆ ನಗರದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದರೂ ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ. ಅವರುಗಳು ಮೊದಲು ತಮ್ಮ‌ಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ. ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾವು ರಾಜಕೀಯ ಮಾಡುವುದು ಬಿಟ್ಟು ಜನರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ" ಎಂದರು.

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments