ಆರಂಭ ಸುದ್ದಿ ಕನ್ನಡ

ನಾಡಿನ ಐತಿಹಾಸಿಕ ಪರಂಪರೆ ಸಾರುವ ನಂದಿನಿ ದಸರಾ ಹಬ್ಬಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ!!!

www.arambhsuddikannada.com

ಬೆಂಗಳೂರು ಸೆಪ್ಟೆಂಬರ್ 22ಆರಂಭ ಸುದ್ದಿ ಕನ್ನಡ

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನಲ್ಲಿರುವ ನವರಾತ್ರಿ ವೃತ್ತದಲ್ಲಿ ನಾಡ ಹಬ್ಬ ದಸರಾ ಉತ್ಸವದ ಜೊತೆಗೆ ನಂದಿನಿ ಉತ್ಸವ 2025 ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ದುರ್ಗಾ ಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜಾ ಹೋಮ ಹವನ ನಡೆಸಿ ನಂತರ ಅನ್ನದಾನ ಏರ್ಪಡಿಸಿ ನೂರಾರು ಬಡಾವಣೆ ಯ ಸಾರ್ವಜನಿಕರು ಆಗಮಿಸಿ ದೇವಿಯ ದರ್ಶನ ಪಡೆದುಕೊಂಡು ಅನ್ನ ಪ್ರಸಾದ ಸ್ವೀಕರಿಸಿದರು.ಸಾಯಂಕಾಲ ಈ ನಂದಿನಿ ಉತ್ಸವದ ಉದ್ಘಾಟನೆಯನ್ನು ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ. ಗೋಪಾಲಯ್ಯ ವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎಸ್, ಹರೀಶ್, ಉಪಾಧ್ಯಕ್ಷ ಎನ್, ಜಯರಾಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಿಬಿಎಂಪಿ ಸದಸ್ಯ ಕೆ ವಿ ರಾಜೇಂದ್ರ ಕುಮಾರ್, ಸ್ಥಳೀಯ ಮುಖಂಡರುಗಳಾದ ಹನುಮಂತ ರಾಯಪ್ಪ, ಪ್ರಸನ್ನ ಮುನಿರಾಜು, ಆನಂದ್, ನಾರಾಯಣ ಸ್ವಾಮಿ ಸುರಭಿ ನಾಗರಾಜ್, ಪ್ರಕಾಶ್ ಕಲ್ಗದ್ದೆ, ಪುಷ್ಪಾ ರಾಜೇಂದ್ರ ಕುಮಾರ್, ಇನ್ನು 9 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಯುವ ಪ್ರತಿಭೋತ್ಸವ ಸಾಂಸ್ಕೃತಿಕ, ಕಾರ್ಯಕ್ರಮಗಳು ಜರುಗಲಿದ್ದು, 45 ಶಾಲೆ, 15 ಕಾಲೇಜು ನಿಂದ ಮಕ್ಕಳು ಭಾಗವಹಿಸಿ ತಮ್ಮ ಟ್ಯಾಲೆಂಟ್ ಪ್ರದರ್ಶನ ನೀಡಲಿದ್ದಾರೆ. ನಾಡಿನ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಮೆರಗು ಕಳೆ ಕಟ್ಟಲಿದೆ. ನಾಡಿನ ಹಲವು ಭಾಗಗಳಿಂದ ಕಲಾ ತಂಡಗಳು, ನೃತ್ಯ, ಯೋಗ, ಹಾಡುಗಾರಿಕೆ,ಕುಸ್ತಿ, ದೇಹಾ ದೃಡ್ಯ ಪ್ರದರ್ಶನ, ನಗೆಕೂಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಗಳು ನಡೆಯಲಿವೆ ಎಂದು ಸಂಘಟಕರಾದ ಕೆ ವಿ ರಾಜೇಂದ್ರ ಕುಮಾರ್ ಮಾಧ್ಯಮಕ್ಕೆ ತಿಳಿಸಿದರು. 


ಕಾರ್ಯಕ್ರಮ ಕುರಿತು ಮಾತನಾಡಿದ ನಮ್ಮ ದೇಶದಲ್ಲಿ ಧರ್ಮ ಉಳಿಯಬೇಕೆಂದ್ರೆ ಈ ರೀತಿಯ ಸಂಸ್ಕೃತಿ ಉಳಿಯಬೇಕು, ಈ ರೀತಿಯ ಕಾರ್ಯಕ್ರಮಗಳು 

ಪ್ರತಿಯೊಂದು ಕಡೆ ನಡೆಯಬೇಕು ಆಗಲೇ ನಮ್ಮ ಧರ್ಮ ಆಚಾರ ವಿಚಾರ ಸಂಸ್ಕೃತಿ ಉಳಿಯಲು ಸಾಧ್ಯ, ಎಂದು ಹೇಳಿ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದರು. ಇನ್ನು ಕಾರ್ಯಕ್ರಮ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಯ್ಯ ಅವರು ಈ ರೀತಿ ಕಾರ್ಯಕ್ರಮ ಮಾಡಬೇಕಾದರೆ ದೇವರ ಅನುಗ್ರಹ ಇರಬೇಕು ರಾಜೇಂದ್ರ ಕುಮಾರ್ ಸತತ ವಾಗಿ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ನಂದಿನಿ ಉತ್ಸವ ಹಲವಾರು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಆಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ದೇವಸ್ಥಾನ ಇರುವ ಪ್ರದೇಶ ನಮ್ಮ ಮಹಾಲಕ್ಷ್ಮೀ ಲೇಔಟ್ ಎಂದು ಹೇಳಿದ ಗೋಪಾಲಯ್ಯ ಅವರು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.www.arambhsuddikannada.com

Arambh suddi News Network private limited. (R)

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments