ಆರಂಭ ಸುದ್ದಿ ಕನ್ನಡ

ದೇಶದ ಪ್ರಧಾನಿ ಮೋದಿ ಜನ್ಮದಿನ ಔರಾದನಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಜಿ ಸಚಿವರು ಪ್ರಭು ಚೌಹನ್!!!


ಬೀದರ್ ಜಿಲ್ಲಾ ಔರಾದ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲದ ವತಿಯಿಂದ ಸೆ.17ರಂದು ಔರಾದ(ಬಿ) ಪಟ್ಟಣದಲ್ಲಿ ಸೇವಾ ಪಾಕ್ಷಿಕ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಪಶು ಆಸ್ಪತ್ರೆಯ ಆವರಣದಲ್ಲಿ ಸಸಿ ನೆಟ್ಟರು. ಈ ವೇಳೆ ಮಾತನಾಡಿದ ಅವರು, ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಶೇಷವಾಗಿಸಲು ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ನಡೆಯುತ್ತಿದ್ದು, ಔರಾದ(ಬಿ)ನಲ್ಲಿಯೂ ಸಸಿ ನೆಡುವ ಕಾರ್ಯಕ್ರಮ ಹಾಗೂ ಮತ್ತಿತರೆ ಸೇವಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

ಪ್ರಧಾನಿಯವರು ಪರಿಸರ ಬೆಳೆಸಲು ಹೆಚ್ಚಿನ ಒತ್ತು ಕೊಟ್ಟಿದ್ದು, ತಮ್ಮ ಜನ್ಮದಿನದಂದು ದೇಶಾದ್ಯಂತ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡಬೇಕೆಂದು ಅಪೇಕ್ಷಿಸಿದ್ದಾರೆ. ಅದರಂತೆ ಎಲ್ಲ ಗ್ರಾಮಗಳಲ್ಲಿ ಸಸಿ ನೆಡುವ ಮೂಲಕ ಪ್ರಧಾನಿಯವರ ಜನ್ಮದಿನದ ಶುಭಾಷಯ ತಿಳಿಸಬೇಕು ಎಂದು ಹೇಳಿದರು.

ಭಾರತದ ಗೌರವವನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಲು ಮತ್ತು ವಿಶ್ವಗುರು ಮಾಡುವ ಸಂಕಲ್ಪದೊಂದಿಗೆ ಪ್ರಧಾನಿಯವರು ನಿರಂತರ ಶ್ರಮಿಸುತ್ತಿದ್ದು, ದೇಶಕ್ಕಾಗಿ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ, ಆಯುರಾಗ್ಯ ವೃದ್ಧಿಸಲಿ ಎಂದು ಶಾಸಕರು ಶುಭ ಕೋರಿದರು 

 ಸಿಹಿ ಹಂಚಿ ಸಂಭ್ರಮ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಶಾಸಕರು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಸಿಹಿ‌ ವಿತರಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಸಂಜು ವಡೆಯರ್, ಬಾಬು ರಾಠೋಡ, ಗುಂಡಪ್ಪ ಮುಧಾಳೆ, ಸಚಿನ ರಾಠೋಡ, ಖಂಡೋಬಾ ಕಂಗಟೆ, ಬಸವರಾಜ ಹಳ್ಳೆ, ಅಶೋಕ ಅಲ್ಮಾಜೆ, ಸುಜಿತ ರಾಠೋಡ, ಸಿದ್ರಾಮ ನಿಡೋದೆ, ಪ್ರಕಾಶ ಜೀರ್ಗೆ, ರವೀಂದ್ರರೆಡ್ಡಿ ಉಜನಿ, ಜಗದೀಶ ಪಾಟೀಲ, ಮಾಧವ ಮಾಳಕಾರಿ, ಪ್ರಕಾಶ ಅಲ್ಮಾಜೆ, ಯೋಗೇಶ ಸುರನಾರ, ಸಂದೀಪ ಪಾಟೀಲ, ರಮೇಶ ಗೌಡಾ, ನರಸಿಂಗ್ ಸೋಲಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.www.arambhsuddikannada.com

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments