ಆರಂಭ ಸುದ್ದಿ ಕನ್ನಡ

ನವದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಅಪೂರ್ವ ಕಾರ್ಯಕ್ರಮದಲ್ಲಿ ಸಂಜಯಕುಮಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ನಗದನ್ನು ಒಳಗೊಂಡಿದೆ!!!

www.arambhsuddikannada.com

ನವದೆಹಲಿ ಆರಂಭ ಸುದ್ದಿ ಕನ್ನಡ 09-10-25 ರಾಷ್ಟ್ರಪತಿ ಭವನ ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತುಕ್ರೀಡಾ ಮಂತ್ರಾಲಯ ಕೊಡಮಾಡುವ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಮೈ ಭಾರತ ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರಪತಿ ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಹಾಗೂ ಯುವ ಚಿಂತಕಸಂಜಯಕುಮಾರ ಅವರ ಸಮಾಜ ಸೇವೆಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಶಸ್ತಿ ಅವರು ಪ್ರಧಾನ ಮಾಡಿ ಗೌರವಿಸಿದರು ನವದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಅಪೂರ್ವ ಕಾರ್ಯಕ್ರಮದಲ್ಲಿ ಸಂಜಯಕುಮಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ನಗದನ್ನು ಒಳಗೊಂಡಿದೆ ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ, ಸಂಸದೆ ಸಚಿವೆ ರಕ್ಷಾ ಖಡಸೆ, ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕಿ ವಂದಿತಾ ಶರ್ಮಾ, ಯುವ ಸಬಲೀಕರಣ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ನಿತೇಶಕುಮಾರ ಮಿಶ್ರಾ ಈ ವೇಳೆ ಉಪಸ್ಥಿತರಿದ್ದರು ಪ್ರಶಸ್ತಿ ಪ್ರಧಾನದ ವೇಳೆ ಸಂಜಯಕುಮಾರ ಅವರ ಕೈಗೊಂಡ ರಕ್ತದಾನ, ಸಾವಿರಾರು ಸಸಿಗಳನ್ನು ನೆಡುವ ಕಾರ್ಯ, ಬಡ ಮಕ್ಕಳಿಗೆ ಆರ್ಟ್ ಆಫ್ ಗಿವಿಂಗ್ ಮೂಲಕ ಮಕ್ಕಳಿಗೆ ಉಚಿತ ಪುಸ್ತಕಗಳನ್ನು , ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಕಾರ್ಯಗಳ ಕುರಿತು, ಸ್ವಚ್ಚತಾ ಕಾರ್ಯಕ್ರಮದ ಕುರಿತು ನಿರೂಪಕರು ವಿವರಿಸಿದರುನಂತರ ರಾಷ್ಟ್ರಪತಿಗಳು ಸಂಜಯಕುಮಾರ ಅವರಿಗೆ ಪದಕ ಪ್ರಧಾನ ಮಾಡಿ ಅಭಿನಂದಿಸಿದರು ಸಂಜಯಕುಮಾರ ಅವರ ತಂದೆ, ತಾಯಿ ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿ ಯಾದರು ಪ್ರಶಸ್ತಿ ಸ್ವೀಕರಿಸಿದ‌ ನಂತರ ಅನಿಸಿಕೆ ಹಂಚಿಕೊಂಡ ಸಂಜಯಕುಮಾರ ಬಿರಾದಾರ, ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ, ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಪ್ರಶಸ್ತಿ ಪಡೆಯುವ ನನ್ನ ಕನಸು ಈಡೇರಿದೆ, ಇದಕ್ಕೆಲ್ಲ ನನ್ನ ತಂದೆ, ತಾಯಿ, ಗುರುವೃಂದ, ಸ್ನೇಹಬಳಗದ ಹಾರೈಕೆಯೇ ಕಾರಣ, ಈ ಪ್ರಶಸ್ತಿ ನನಗೆ ಇನ್ನಷ್ಟೂ ಜವಾಬ್ದಾರಿ ಹೆಚ್ಚಿಸಿದೆ, ಇನ್ನೂ ಪರಿಣಾಮಕಾರಿಯಾಗಿ ಸೇವೆ ಮಾಡುವ ಹುಮ್ಮಸ್ಸು ಹೆಚ್ಚಿಸಿದೆ, ಸೇವೆಯಲ್ಲಿ ಸಂತೋಷ ಕಾಣೋಣ ಎಂದರು‌.

ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ದಕ್ಷಿಣ ಭಾರತದಿಂದ ಈ ಪ್ರಶಸ್ತಿಗೆ ಸಂಜಯಕುಮಾರ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಸಂಜಯಕುಮಾರ ಬಿರಾದಾರ ಈ ಹಿಂದೆ ಪ್ರತಿಷ್ಠಿತ ಕಾಮನ್‌ವೆಲ್ತ್ ಯೂಥ್ ಕ್ಲೈಮೇಟ್ ಚೇಂಜ್ ನೆಟವರ್ಕ್ ಇಂಡಿಯಾದ ಯೂಥ್ ಲೀಡರ್ ಆಗಿ ನೇಮಕಗೊಂಡಿದ್ದರು ಮೂಲತಃ ವಿಜಯಪುರ ಜಿಲ್ಲೆಯ ಪುಟ್ಟ ಗ್ರಾಮ ತೆಲಗಿಯರವಾದ ಸಂಜಯಕುಮಾರ ರಾಷ್ಟ್ರದ ಮಟ್ಟದಲ್ಲಿ ಸಾಮಾಜಿಕ ಸೇವೆ ಗುರುತಿಸಿಕೊಂಡಿದ್ದಾರೆ. www.arambhsuddikannada.com

Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments